Ripponpete | ಹೃದಯಾಘಾತದಿಂದ ಯುವಕ ಸಾವು
Ripponpete | ಹೃದಯಾಘಾತದಿಂದ ಯುವಕ ಸಾವು ರಿಪ್ಪನ್‌ಪೇಟೆ : ಹೃದಯಾಘಾತದಿಂದ ಮೂವತ್ತು ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಪಟ್ಟಣದ ಸಮೀಪದ ಕೋಟೆತಾರಿಗ ನಿವಾಸಿ ಶ್ಯಾಮ್ ಜಾರ್ಜ್ (30) ಮೃತಪಟ್ಟ ಯುವಕನಾಗಿದ್ದಾನೆ. ರಿಪ್ಪನ್‌ಪೇಟೆ ಪಟ್ಟಣದ ಅಂಗಡಿಗಳಿಗೆ ಪಾರ್ಸೆಲ್ ಡೆಲಿವರಿ ಮಾಡುತಿದ್ದ ಶ್ಯಾಮ್ ಜಾರ್ಜ್ ಗುರುವಾರ ರಾತ್ರಿ ಸ್ನೇಹಿತರೊಂದಿಗೆ ಇರುವಾಗ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥನಾಗಿದ್ದಾನೆ.ಕೂಡಲೇ ಆತನನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು.ಆದರೆ ಅಷ್ಟರಲ್ಲಾಗಲೇ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂಲತಃ ಕೇರಳದವರಾದ ಜಾರ್ಜ್ ಎಂಬುವವರ…