ಇಂದಿನಿಂದ ಲಾಕ್ ಡೌನ್ ಸಡಿಲಿಕೆ::

ಬೆಂಗಳೂರು:ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅಪಾರ ಸಾವು- ನೋವಿಗೆ ಕಾರಣವಾಗಿತ್ತು. ಇದರ ಪರಿಣಾಮ ಎರಡೂವರೆ ತಿಂಗಳು ಕರುನಾಡಿಗೆ ಬೀಗ ಜಡಿಯಲಾಗಿತ್ತು. ಇದೀಗ ಕೋವಿಡ್ ಅರ್ಭಟ ಕ್ರಮೇಣ ಇಳಿಕೆ ನತ್ತ ಸಾಗ್ತಿದೆ. ಹೀಗಾಗಿ ರಾಜ್ಯವನ್ನ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗ್ತಿದೆ. ಈಗಾಗಲೇ ಎರಡು ಹಂತದಲ್ಲಿ ಅನ್ ಲಾಕ್ ಮಾಡಿದ್ದ ಸರ್ಕಾರ ಇಂದಿನಿಂದ ಮೂರನೇ ಹಂತದ ಅನ್ ಲಾಕ್ ಘೋಷಣೆ ಮಾಡಿ ಗೈಡ್ ಲೈನ್ ಸಹ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಇಳಿಕೆ ಬೆನ್ನಲ್ಲೇ ಕುರುನಾಡಿಗೆ ಹೇರಿದ್ದ ಲಾಕ್ ನ್ನ ಸರ್ಕಾರ ಹಂತ ಹಂತವಾಗಿ ಸಡಿಲ ಮಾಡುತ್ತಿದೆ. ಈಗಾಗಲೇ ಮೊದಲ ಹಾಗೂ ಎರಡನೇ ಹಂತದ ಅನ್ ಲಾಕ್ ನಲ್ಲಿ ಕೆಲ ಕೇತ್ರಗಳಿಗೆ ಹಾಕಿದ್ದ ನಿರ್ಬಂಧ ಸಡಿಲಗೊಳಿಸಿರುವ ಸರ್ಕಾರ ನಾಳೆಯಿಂದ ಜಾರಿಯಾಗ್ತಿರುವ ಮೂರನೇ ಹಂತದ ಅನ್ ಲಾಕ್ ನಲ್ಲಿ ಇನ್ನಷ್ಟು ಕ್ಷೇತ್ರಗಳಿಗೆ ರಿಲೀಫ್ ನೀಡುತ್ತಿದೆ. ನಾಳೆ ಬೆಳಗ್ಗೆ 5 ಗಂಟೆಯಿಂದ ಅನ್ ಲಾಕ್ 3.0ಜಾರಿಗೆ ಬರುತ್ತಿದ್ದು, ಇದ್ರಲ್ಲಿ ಇನ್ನಷ್ಟು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ಪೂರ್ಣ ಪ್ರಮಾಣದ ಅನ್‌ಲಾಕ್‌ 3.0 ಗೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ಸಿದ್ಧಗೊಂಡಿದ್ದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಲು ವ್ಯಾಪಾರಸ್ಥರು ಸಿದ್ಧಗೊಳ್ಳುತ್ತಿದ್ದು, ಶಾಪಿಂಗ್‌ ನಡೆಸಲು ಗ್ರಾಹಕರು ಸಜ್ಜುಗೊಂಡಿದ್ದಾರೆ. ಇನ್ನು ದೇವಸ್ಥಾನ ಚರ್ಚ್, ಮಸೀದಿ ಗೆ ತೆರಳಲು ಭಕ್ತಾಧಿಗಳು ಕಾಯುತ್ತಿದ್ದು, ಬಾರ್ ನಲ್ಲಿ ಕುಳಿತು ಎಣ್ಣೆ ಕುಡಿಯಲು ಮದ್ಯ ಪ್ರಿಯರು ಕಾಯುತ್ತಿದ್ದಾರೆ

ಅನ್ ಲಾಕ್ 3.0 ಇಂದು ಬೆಳಗ್ಗೆ 5ರಿಂದ ಜುಲೈ 19 ನೇ ತಾರೀಖುವರಿಗೆ ಜಾರಿಯಲ್ಲಿ ಇರಲಿದೆ. ರಾಜ್ಯದಲ್ಲಿ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟಿಗೊಂಡಿದ್ದು, ರಾಜ್ಯದಲ್ಲಿ ಇದುವರೆಗೆ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂ ವನ್ನು ತೆಗೆದುಹಾಕಿ, ನೈಟ್ ಕರ್ಫ್ಯೂ ಮುಂದುವರಿಸಲಾಗಿದೆ. ಕೊರೊನಾ ಉಸ್ತುವಾರಿ ಸಚಿವರು, ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿ ಅನ್ ಲಾಕ್ 3.0 ಮಾರ್ಗಸೂಚಿಯನ್ನ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟ ಮಾಡಿದ್ದಾರೆ.

ಅನ್ ​​ಲಾಕ್ 3.Oನಲ್ಲಿ ಯಾವ ಕ್ಷೇತ್ರಕ್ಕೆ ರಿಲೀಫ್​..?

ಬಿಎಂಟಿಸಿ, ಕೆಎಸ್ಆರ್​​​ಟಿಸಿಯಲ್ಲಿ ಶೇ.100 ಪ್ರಯಾಣಿಕರಿಗೆ ಅನುಮತಿ.

ಸರ್ಕಾರಿ/ಖಾಸಗಿ ಕಚೇರಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಶೇ 100 ಸಿಬ್ಬಂದಿಯೊಂದಿಗೆ ಕಾರ್ವನಿರ್ವಹಿಸಲು ಅವಕಾಶ

ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳನ್ನು ಮಾಡುವಂತಿಲ್ಲ.

ಮಾಲ್ ಓಪನ್​ಗೆ ಷರತ್ತು ಬದ್ದ ಅನುಮತಿ

ಮದ್ಯಪ್ರಿಯರಿಗೆ ಗುಡ್ ನ್ಯೂಸ್- ಬಾರ್ ನಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ

ಸ್ವಿಮ್ಮಿಂಗ್ ಪೂಲ್ ನಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಮಾತ್ರ ಅವಕಾಶ

ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ

ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಗ್ಗೆ 5 ವರೆಗೆ ನೈಟ್ ಕರ್ಫ್ಯೂ ಜಾರಿ

ಅಂತ್ಯಸಂಸ್ಕಾರಕ್ಕೆ 20 ಸದ್ಯಸರು ಭಾಗವಹಿಸಲು ಅವಕಾಶ

ಮದುವೆ ಹಾಗೂ ಕೌಟುಂಬಿಕ ಕಾರ್ಯ ನಡೆಸಲು ಅನುಮತಿ

ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಆಧಾರದ ಮೇಲೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ನಂತರ, ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ವಿಧಿಸಬಹುದು

ಅನ್ ಲಾಕ್ 3.O ನಲ್ಲಿ ಯಾವ ಕ್ಷೇತ್ರಕ್ಕೆ ನಿರ್ಬಂಧ.?

ಮುಂದಿನ ಆದೇಶದವರೆಗೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಟ್ಯುಟೋರಿಯಲ್, ಕಾಲೇಜುಗಳು ಮುಚ್ಚಿಯೇ ಇರುತ್ತವೆ.

ಚಿತ್ರಮಂದಿರಗಳು, ಸಿನೆಮಾ ಹಾಲ್‌ಗಳು ಮತ್ತು ಪಬ್‌ಗಳ ಮೇಲಿನ ನಿರ್ಬಂಧಗಳು ಮುಂದುವರೆಯುತ್ತದೆ.

ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶ ಇಲ್ಲ.

ವರದಿ : ರಾಮನಾಥ್

Leave a Reply

Your email address will not be published. Required fields are marked *