ನೊಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ:

ರಿಪ್ಪನ್ ಪೇಟೆ: ಇಂದು ಗವಟೂರು ಮೂರನೆ ವಾರ್ಡಿನ ಸದಸ್ಯರಾದ ಬಿ ಆಸಿಫ಼್ ನೇತ್ರತ್ವದಲ್ಲಿ ಗವಟೂರು ಗ್ರಾಮದ ಶ್ರೀರಾಮನಗರ,ನೆಹರು ಬಡಾವಣೆ ಮತ್ತು ಮಸೀದಿ ಕಾಲೋನಿಯ ಸುಮಾರು 200 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಕೋವಿಡ್ ನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ಧೈರ್ಯ ತುಂಬಿದರು.
ರಿಪ್ಪನ್ ಪೇಟೆ ಗ್ರಾಮಪಂಚಾಯಿತ್ ವತಿಯಿಂದ ಒಂದು ವಾರ್ಡ್ ಗೆ 70 ಕಿಟ್ ಗಳನ್ನು ನೀಡಿದ್ದರೂ ಎಲ್ಲಾ ಸಂತ್ರಸ್ತರಿಗೆ ಕಿಟ್ ತಲುಪಿಸಲು ಸಾಧ್ಯವಾಗದೇ ಇದ್ದದನ್ನು ಮನಗಂಡ ಗವಟೂರು ಮೂರನೇ ವಾರ್ಡಿನ ಸದಸ್ಯರಾದ ಬಿ ಆಸಿಫ಼್ ವೈಯಕ್ತಿಕ ಹಾಗೂ ಸ್ನೇಹಿತರ ಸಹಕಾರದೊಂದಿಗೆ ಸುಮಾರು 200 ಹೆಚ್ಚುವರಿ ಕಿಟ್ ಗಳನ್ನು ಎಲ್ಲಾ ವರ್ಗದ ಸಂತ್ರಸ್ತ ಕುಟುಂಬಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಆಸಿಫ಼್ ಈ ಒಂದು ಸಂಕಷ್ಟದ ಸಮಯದಲ್ಲಿ ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ನೊಂದ ಕುಟುಂಬಗಳಲ್ಲಿ ಧೈರ್ಯ ಹೆಚ್ಚುತ್ತದೆ.ನೊಂದ ಕುಟುಂಬಗಳ ಜೊತೆ ಕಷ್ಟ ಸುಖಗಳಲ್ಲಿ,ಎಲ್ಲಾ ಸಂಧರ್ಭಗಳಲ್ಲಿ ಜೊತೆ ಇರುತ್ತೇನೆ ಎಂದೂ ಭರವಸೆ ನೀಡಿದರು.

ಕಿಟ್ ಪಡೆದ ಸಂತ್ರಸ್ತರು ಆಸೀಫ಼್ ರವರ ಭರವಸೆಯ ನುಡಿಗಳಿಗೆ ಮೆಚ್ಚಿ  ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವೇದಾವತಿ ಪರಮೇಶ್,ಸಾರಾಭಿ ಹೈದರ್ ಮತ್ತು ಪ್ರಕಾಶ್ ಪಾಲೇಕರ್ ಉಪಸ್ತಿತರಿದ್ದರು.

ವರದಿ: ರಾಮನಾಥ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *