ತೀರ್ಥಹಳ್ಳಿ :ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ಕಾಂಗ್ರೆಸ್ ವತಿಯಿಂದ ನಡೆಯುತ್ತಿದ್ದು , ಪೆಟ್ರೋಲ್ ಡೀಸೆಲ್, ಗ್ಯಾಸ್ ಮತ್ತು ಶ್ರೀ ಸಾಮಾನ್ಯ ಜನರ ಬಳಕೆಯ ವಸ್ತುಗಳಬೆಲೆಯನ್ನು ಯನ್ನು ನಿರಂತರವಾಗಿ ಕೇಂದ್ರ ಸರಕಾರವು ಬೆಲೆ ಏರಿಕೆ ಇಂದು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೈಕಲ್ ಜಾಥಾ ದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಿವ ರಾಜಪುರದ ಗಣಪತಿ ದೇವಸ್ಥಾನದ ಮುಂಭಾಗದಿಂದ ಸ್ವತಃ ಕಿಮ್ಮನೆ ರತ್ನಾಕರ್ ಅವರು ಸೈಕಲ್ ಏರಿ ಪಟ್ಟಣದ ತಾಲ್ಲೂಕು ಕಚೇರಿಯ ವರೆಗೆ ಬಂದು ಪ್ರತಿಭಟನೆಯನ್ನು ನಡೆಸಿದರು.
ತಹಸೀಲ್ದಾರ್ ರವರಿಗೆ ಪ್ರತಿಭಟನಾ ಮನವಿ ಪತ್ರವನ್ನು ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಮಾತನಾಡಿದರು .ನಂತರ ಸರ್ಕಾರಿ ಜೆಸಿ ಆಸ್ಪತ್ರೆಯ ತನಕ ಮೆರವಣಿಗೆಯಲ್ಲಿ ಹೋಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ನಿನ್ನೆ ದಿನ ಪಟ್ಟಣ ಪಂಚಾಯ್ತಿ ವಾರ್ಡ್ 4 ಮತ್ತು 13 ಕೊರೊನಾ ಲಸಿಕೆಗಳು ನೀಡುತ್ತಿದ್ದು ಕೇವಲ 1 ಗಂಟೆಯ ಅವಧಿಯಲ್ಲಿ ಲಸಿಕೆಗಳನ್ನು ನೀಡುವುದನ್ನು ನಿಲ್ಲಿಸಲಾಗಿತ್ತು .ಈ ರೀತಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಪ್ರಭಾವ ರಾಜಕೀಯ ಒತ್ತಡ ಮತ್ತು ಮಾತಿನ ಮೇಲೆ ತಾಲ್ಲೂಕು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು .ಲಸಿಕೆ ನೀಡುವುದು ಕೇವಲ ವಾರ್ಡ್ ಮಟ್ಟದಲ್ಲಿ ಸೀಮಿತಗೊಳಿಸದೆ ಸದರಿ ಲಸಿಕೆ ನೀಡುವ ಸ್ಥಳಕ್ಕೆ ಯಾರೇ ಆಧಾರ್ ಕಾರ್ಡ್ ಗಳನ್ನು ತೆಗೆದುಕೊಂಡು ಬಂದರೂ ಮುಕ್ತವಾಗಿ ನೀಡಬೇಕೆಂದು ಕಿಮ್ಮನೆ ರತ್ನಾಕರ್ ಅವರು ಒತ್ತಾಯಿಸಿದರು.
ಸೈಕಲ್ ಜಾಥಾದಲ್ಲಿ ಮತ್ತು ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರೊಂದಿಗೆ ಒಕ್ಕಲಿಗರ ಸಂಘದ ಮತ್ತು ಕೃಷಿ ಸಮಾಜದ ಅಧ್ಯಕ್ಷ ರಾದ ಬಾಳೇಹಳ್ಳಿ ಪ್ರಭಾಕರ್ ,ಎಪಿಎಂಸಿ ಮಾಜಿ ಅಧ್ಯಕ್ಷರಾದ ಹಸಿರುಮನೆ ಮಹಾಬಲೇಶ್ .ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆಳಕೆರೆ ದಿವಾಕರ್, ಪತ್ರಕರ್ತರಾದ ತುಂಗಾ ವಾರ್ತೆ ವಿಶ್ವನಾಥ ಶೆಟ್ಟಿ ,ಪಟ್ಟಣ ಪಂಚಾಯಿತಿ ಸದಸ್ಯರು ಎಪಿಎಂಸಿ ಸದಸ್ಯರಾದ ಬಿ ಗಣಪತಿ ,ಕಾಂಗೈ ಮುಖಂಡ ಅಮ್ರಪಾಲಿ ಸುರೇಶ್.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ . ಹುಂಚದಕಟ್ಟೆ ಆದರ್ಶ್, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರೆಹಮತುಲ್ಲಾ ಅಸಾದಿ ,ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಬಾಳೆಬೈಲು ರಾಘವೇಂದ್ರ ಶೆಟ್ಟಿ . ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷರಾದ ವಿಲಿಯಂ ಮಾರ್ಟಿಸ್ .ಪಟ್ಟಣ ಪಂಚಾಯಿತಿ ಸದಸ್ಯರಾದ ನಮೃತಾ .ರತ್ನಾಕರ ಶೆಟ್ಟಿ . ಶಬನಮ್ .ಗೀತಾ ರಮೇಶ್. ಮಂಜುಳ .ಮುಖಂಡರಾದ ಹರ್ಷೇಂದ್ರಕುಮಾರ್ ಪಡುವಳ್ಳಿ. ಹಾರೋಗೊಳಿಗೆ ವಿಶ್ವನಾಥ್ .ಮಿಲ್ ಕೇರಿ ಹರೀಶ್ , ಡಿ ಲಕ್ಷ್ಮಣ್ .ಸೈಯದ್ ಯಾಸಿನ್.ಇನ್ನೂ ಮುಂತಾದ ನಾಯಕರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು ….
ವರದಿ: ಪ್ರಶಾಂತ್ ಮೇಗರವಳ್ಳಿ