w
Headlines
Home » ಮಾರುತಿಪುರ :ಆಟವಾಡುತ್ತಿದ್ದ ಬಾಲಕನ ಜೀವನದಲ್ಲಿ ವಿಧಿಯ ಕ್ರೂರ ಆಟ : ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಬಡ ವಿದ್ಯಾರ್ಥಿ ,

ಮಾರುತಿಪುರ :ಆಟವಾಡುತ್ತಿದ್ದ ಬಾಲಕನ ಜೀವನದಲ್ಲಿ ವಿಧಿಯ ಕ್ರೂರ ಆಟ : ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಬಡ ವಿದ್ಯಾರ್ಥಿ ,

ಹೊಸನಗರ : ಮಾರುತಿಪುರದಲ್ಲಿ ಎಂಟನೇ ತರಗತಿ ಓದುತ್ತಿರುವ ಬಾಲಕ  ಕೌಶಿಕ್ ಇದೇ ತಿಂಗಳ 4ರಂದು ಶಾಲೆಯಲ್ಲಿ ಆಡುತ್ತಿರುವಾಗ ಬಿದ್ದು ತಲೆಯ  ಬಲಬಾಗದಲ್ಲಿ ಬಲವಾಗಿ ಪೆಟ್ಟಾಗಿದ್ದು ಬ್ರೈನ್ ನಲ್ಲಿ ಬ್ಲಾಡ್ ಕ್ಲೋಟ್ ಆಗಿರುವ ಕಾರಣ  ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಗೆ ಮ್ಯಾಕ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸುಮಾರು 2 ಲಕ್ಷ ಕ್ಕೂ ಹೆಚ್ಚು ಚಿಕಿತ್ಸಾ ವೆಚ್ಚವಾಗುವದೆಂದು ಆರೋಗ್ಯ ಸಿಬ್ಬಂದಿಗಳು ತಿಳಿಸಿರುತ್ತಾರೆ.

ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿರುವ ಈ ಬಾಲಕ ತಾಯಿ ವಿಶಾಲ ಜೊತೆ ವಾಸಿಸುತ್ತಿದ್ದು ಯಾವದೇ ಆದಾಯವಿರುವದಿಲ್ಲ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಇವರಿಗೆ ತುರ್ತಾಗಿ ಚಿಕೆತ್ಸೆಯ ಸಲುವಾಗಿ ಹಣದ ಅವಶ್ಯಕತೆ ಇರುವದರಿಂದ  ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ ಈ ಬಡ ಕುಟುಂಬ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ

 9844733213 (ಮಹೇಶ್ ಬಾಣಿಗ )

ಕಾರ್ತೀಕ್ ಗೌಡ 8105532551. ಇವರಿಗೆ ಸಂಪರ್ಕ ಮಾಡಿ ವಿಚಾರಿಸಿ. ನಿಮ್ಮ ಸಹಾಯ ಹಸ್ತಕ್ಕಾಗಿ ತಾಯಿ ಅಂಗಲಾಚಿ ಬೇಡುತ್ತಿದ್ದಾರೆ. ಮಗನನ್ನು ಉಳಿಸುವಲ್ಲಿ ನಿಮ್ಮೆಲ್ಲರ ಸಹಾಯ ನಿರೀಕ್ಷಿಸುತ್ತಿದ್ದಾರೆ ಈ ಬಡ ತಾಯಿ.

Phone pay number: 8105532551 Karthik a h 
Google pay number  9844733213 Mahesh s baniga 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.