ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಮ್ಮ ನಿವಾಸದ ಕಚೇರಿಯಿಂದ ಪಕ್ಷದ ಕಾರ್ಯಕರ್ತರ ಎದುರಲ್ಲೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ದನಕಳ್ಳತನದ ಬಗ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪೊಲೀಸರಿಗೆ ಸರ್ಕಾರದಿಂದ ಕೈ ತುಂಬಾ ಸಂಬಳ ಕೊಡಲಾಗಿದೆ. ಆದರೂ ನಾಯಿ ಎಂಜಲು ಕಾಸನ್ನು ತಿಂದು ಹಾಗೆ ಬಿದ್ದಿರ್ತಾರೆ. ಯೋಗ್ಯತೆ ಇಲ್ಲವೆಂದರೆ ಯೂನಿಫಾರ್ಮ್ ಬಿಚ್ಚಿಟ್ಟು ಮನೆಗೆ ಹೋಗಲಿ. ಮಣ್ಣು ಹೊರಲಿ ಎಂದು ಕೂಗಾಡಿದ್ದಾರೆ.
ಪ್ರತಿನಿತ್ಯ ಗೋವು ಸಾಗಾಟ ಮಾಡುವವರು ಯಾರೆಂದು ಪೊಲೀಸರಿಗೆ. ಆದರೂ ಲಂಚ ತಿಂದು ನಾಯಿಯಂತೆ ಬಿದ್ದಿರುತ್ತಾರೆ. ಪೊಲೀಸರಿಗೆ ಆತ್ಮಗೌರವ ಬೇಡವಾ..? ಗೃಹ ಸಚಿವನಾಗಿ ನಾನು ಇರಬೇಕಾ ಬೇಡ್ವಾ..? ಎಲ್ಲಾ ಕೆಟ್ಟು ಹಾಳಾಗಿ ಹೋಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಗೋವಿನ ಪ್ರಕರಣದಲ್ಲಿ ಆರೋಪಿಗಳು ಬಂಧನವಾಗ್ತಿದ್ದ ಹಾಗೆ ಎಲ್ಲವೂ ತಣ್ಣಗಾಗಿದ್ರೆ..ಎಲ್ಲವೂ ಸರಿಯಾಗಿರ್ತಿತ್ತು.ಆದ್ರೆ ತೀರ್ಥಹಳ್ಳಿಯ ಹಿಂದುಪರ ಸಂಘಟನೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತೀರ್ಥಹಳ್ಳಿಯ ಅಜಾದ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಪೊಲೀಸ್ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಭಟನೆಯಲ್ಲಿ ಬಿಜೆಪಿಯ ಮುಖಂಡರುಗಳು ಭಾಗವಹಿಸಿದ್ರು. ಪೊಲೀಸ್ ವ್ಯವಸ್ಥೆ ಬಗ್ಗೆ ಹಿಂದುಪರ ಸಂಘಟನೆಗಳು ಪ್ರಶ್ನೆ ಮಾಡಿದ್ದು, ಖುದ್ದು ಆರಗಾ ಜ್ಞಾನೇಂದ್ರರನ್ನೇ ಪ್ರಶ್ನೆ ಮಾಡಿದಂತಾಗಿದೆ. ಗೃಹ ಸಚಿವರ ಕ್ಷೇತ್ರದಲ್ಲಿಯೇ ಬಿಜೆಪಿಯ ಅಂಗವಾಗಿರುವ ಸಂಘಟನೆಗಳು ಪ್ರತಿಭಟನೆಗಿಳಿದ್ರೆ..,ಸಹಜವಾಗಿಯೇ ಕುತುಹಲಕ್ಕೆ ಎಡೆಮಾಡಿಕೊಟ್ಟಿದೆ.
ಈ ಬೆಳವಣಿಗೆಯನ್ನು ಪ್ರತಿಪಕ್ಷ ಕಾಂಗ್ರೇಸ್ ರಾಜಕೀಯ ಅಸ್ತ್ರವಾಗಿ ಪ್ರಯೋಗಿಸಿದ್ರೂ ಅಚ್ಚರಿಯಿಲ್ಲ. ಇದು ಆರಗಾ ಜ್ಞಾನೇಂದ್ರರನ್ನು ಕೆರಳಿಸಿರುವುದಂತೂ ಸುಳ್ಳಲ್ಲ.
ತೀರ್ಥಹಳ್ಳಿಯ ಗೋವಿನ ಪ್ರಕರಣದ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಗೋವಿನ ಕಳ್ಳತನ ಪ್ರಕರಣಗಳು ನಡೆದಾಗ ಸಹಜವಾಗಿಯೇ ಗೃಹ ಸಚಿವರು ಪೊಲೀಸರ ಮೇಲೆ ಉಗ್ರ ರೂಪ ತಾಳಿದ್ದಾರೆ. ಗುಡ್ಡೆಕೊಪ್ಪದ ತಮ್ಮ ಮನೆಯಲ್ಲಿ ಪೊಲೀಸರಿಗೆ ತರಾಟೆ ತೆಗೆಯುವಾಗ ಯಾರೋ ಕಾರ್ಯಕರ್ತರೋ,,ಅಥವಾ ಗೃಹ ಸಚಿವರ ಭೇಟಿಗೆ ಬಂದವರೋ ಗೊತ್ತಿಲ್ಲ..ಆರಗಾ ಬೈಗುಳವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಗೃಹ ಸಚಿವರು ಬೈಯ್ಯುವ ಪರಿ ಎಂತವರನ್ನು ಅಚ್ಚರಿಗೊಳಿಸುತ್ತೆ.
ಈ ಆಡಿಯೋ ವೈರಲ್ ಆಗುತ್ತಾ ಎಚ್ಚೆತ್ತ ಗೃಹ ಸಚಿವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾರೆ, ನಾನು ಎಲ್ಲ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋ ಕಳ್ಳರಿಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾದ. ಇದರಿಂದ ಗಂಭೀರ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಿಂದ ನನಗೆ ಬೇಸರವಾಗಿದೆ. ಪೊಲೀಸರ ಬಗ್ಗೆ ನನಗೆ ಗೌರವ ಇದೆ. ಎಲ್ಲಾ ಒಂದೇ ರೀತಿ ಇರುವುದಿಲ್ಲ. ಕರ್ನಾಟಕದಲ್ಲಿ ದಕ್ಷ ಪೊಲೀಸರೂ ಇದ್ದಾರೆ ಎಂದು ಹೇಳಿದ್ದಾರೆ.