ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಬೆಳಿಗ್ಗೆ 9.15 ರ ಸಂದರ್ಭದಲ್ಲಿ ಶಿವಮೊಗ್ಗದಿಂದ ಸಾಗರದ ಕಡೆ ಬಸ್ ಹೊರಟ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಸ್ ಹತ್ತುತ್ತಿದ್ದರು ಇನ್ನೂ ಹತ್ತು ಜನ ಹುಡುಗರು ಬಸ್ ಹತ್ತುತ್ತಿರುವಂತಹ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯತನದಿಂದ ಒಬ್ಬ ವಿದ್ಯಾರ್ಥಿನಿ ಬಸ್ ಹತ್ತುತ್ತಿರುವಾಗಲೇ ಬಸ್ಸನ್ನು ಚಲಾಯಿಸಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಬಸ್ಸಿನಿಂದ ಕೆಳಗೆ ಬಿದ್ದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ತಕ್ಷಣ ಉಳಿದ ವಿದ್ಯಾರ್ಥಿಗಳು ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಸಾಗರದ ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂದೆ ಧರಣಿ ನಡೆಸಿದರು.
ಈ ಬಸ್ ನವರು ಪ್ರತಿದಿನ ಹೀಗೆ ಗಡಿಬಿಡಿ ಮಾಡುತ್ತಿದ್ದಾರೆ ಹಾಗೂ ನಮಗೆ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಹಾಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ತೊಂದರೆ ಕೊಡಬೇಡಿ ಎಂದು ಡಿಪೋ ಮ್ಯಾನೇಜರ್ ಹತ್ತಿರ ಮನವಿ ಕೂಡ ಮಾಡಿದರು.
ಮನವಿಗೆ ಸ್ಪಂದಿಸಿ ದಂತಹ ಡಿಪೋದವರು ಇನ್ನು ಮುಂದೆ ಈ ರೀತಿಯಾದಂತಹ ದುರ್ಘಟನೆ ನಡೆಯುವುದಿಲ್ಲ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ ಸಂದರ್ಭದಲ್ಲಿ 2 ಬಸ್ಸುಗಳನ್ನು ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿಎಂ ಚಿನ್ಮಯ್,ಅಜಿತ್ ಕೇಶವ್,ರೋಷನ್, ವಾಗೇಶ, ಅಜಿತ್ M.N ,ಸಂಚಿತ,ಮಾಲತಿ, ಜ್ಯೋತಿ,ಸಹನಾ,ನೇಹಾ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಪವನ್ ಕುಮಾರ್ ಕಠಾರೆ