ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಹೊಳೆಸಿದ್ದೇಶ್ವರ ಸ್ವಾಮಿಯ ಎಳ್ಳಮವಾಸ್ಯೆ ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ಮಳಲಿಮಠದ ಷ.ಬ್ರ.ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಗಳು ಸಂಘಟನೆ ಸದ್ಭಾವನೆಯೊಂದಿಗೆ ಯುವಜನಾಂಗ ಧಾರ್ಮಿಕ ಅಚರಣೆಗಳಲ್ಲಿ ತೊಡಗಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು, ದುಡಿಮೆಯಿಂದ ಗಳಿಸಿದ ಹಣವನ್ನು ದಾನ, ಧರ್ಮಕ್ಕಾಯಕ್ಕೆ ವಿನಿಯೋಗಿಸಿದರೆ ಪುಣ್ಯನಾದರು ಬರುತ್ತದೆ ಅದೇ ಬಚ್ಚಿಟ್ಟರೆ ಪರರ ಪಾಲಾಗುತ್ತದೆ ಈಗಲಾದರೂ ಗಳಿಸಿದ ಸಂಪತ್ತು ಇನ್ನೊಬ್ಬರಿಗೆ ದಾನ ಮಾಡಿ ಪುಣ್ಯ ಗಳಿಸಿ ಎಂದು ಹೇಳಿದರು.
ನಂತರ ಮಾತನಾಡಿದ ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಹೊಳೆ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹೊಸದಾಗಿ ಶೀಟ್ ಹಾಕುವ ಬೇಡಿಕೆ ಇದೆ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ವ್ಯವಸ್ಥಿತವಾಗಿ ಶೀಟ್ ಹಾಕಿ ಕೊಡುವ ಕೆಲಸ ಮಾಡುತ್ತೇನೆ ಹಾಗೆಯೇ ಹೊಳೆ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಈ ಹಿಂದೆ ಹೇಗೆ ನಮ್ಮ ಸಹಕಾರವಿತ್ತು ಹಾಗೆಯೇ ಮುಂದೆಯೂ ನಮ್ಮ ಸಹಕಾರವಿರುತ್ತದೆ ಎಂದು ಹೇಳಿದರು.
ಹೊಳೆಸಿದ್ದೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಡಿ.ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷ ಅರುಣಾಚಲ, ಗ್ರಾ.ಪಂ. ಸದಸ್ಯರಾದ ಗಣಪತಿ ಗವಟೂರು, ವೇದಮೂರ್ತಿ, ರಾಮೋಜಿರಾವ್, ವೆಂಕಟಾಚಲ, ಕೃಷ್ಣಶೆಟ್ಟ್ರು, ದೇವಸ್ಥಾನ ಅರ್ಚಕ ಧರ್ಮಾಕ್ಷಪ್ಪಗೌಡ ಇನ್ನಿತರರು ಹಾಜರಿದ್ದರು.