ಕೌಟುಂಬಿಕ ಸಮಸ್ಯೆಗಳಿಂದ ಹಾಗೂ ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನುಪಿನ ಕಟ್ಟೆ ರಸ್ತೆಯಲ್ಲಿರುವ ಸಿದ್ದೇಶ್ವರ ನಗರದ ನಿವಾಸಿ ಸವಿತಾ(35) ಎಂಬುವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂಸಿಯ ನಿವಾಸಿಯಾಗಿದ್ದ ಸವಿತಾ ಕಳೆದ 14 ವರ್ಷದ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳಿದ್ದರು. ಮದುವೆಯಾದಾಗಿನಿಂದ ರಾಘವೇಂದ್ರ ವಿಪರೀತ ಮದ್ಯ ವ್ಯಸನಿಯಾಗಿದ್ದು ಈ ವ್ಯಸನದಿಂದ ಬದಲಾಗದ ಹಿನ್ನಲೆಯಲ್ಲಿ ಪವಿತ್ರ ಬೇಸತ್ತಿದ್ದರು.
ಇಂದು ಮನೆಯಲ್ಲಿ ಪವಿತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲೆಯಿಂದ ಬಂದ ಮಗ ಕಿಟಕಿಯಲ್ಲಿ ಕಂಡು ತಾಯಿಯ ಆತ್ಮಹತ್ಯೆಯನ್ನು ತಂದೆಗೆ ತಿಳಿಸಿದ್ದಾನೆ.
ಸ್ಥಳಕ್ಕೆ ತುಂಗ ನಗರದ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.