ಹೊಸನಗರ ವಿಧಾನಸಭಾ ಕ್ಷೇತ್ರವು ತಾಲ್ಲೂಕಿನಲ್ಲಿ 2001 ರ ಹಿಂದೆ ಅಸ್ತಿತ್ವದಲ್ಲಿತ್ತು. ಆದರೆ ನಂತರದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯ ಸಮಯದಲ್ಲಿ ಹೊಸನಗರ ಕ್ಷೇತ್ರವನ್ನು ತೀರ್ಥಹಳ್ಳಿ ಮತ್ತು ಸಾಗರ ಕ್ಷೇತ್ರಕ್ಕೆ ಸೇರಿಸಿ ಹೊಸನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರವನ್ನು ಕೈಬಿಡಲಾಗಿತ್ತು.
ಇಂದು ಹೊಸನಗರ ತಾಲ್ಲೂಕಿನ ಎಲ್ಲ ಪಕ್ಷದ ನಾಯಕರು ಪಕ್ಷಾತೀತವಾಗಿ ಪಾಲ್ಗೊಂಡು ಮಾಜಿ ಶಾಸಕ ಬಿ.ಸ್ವಾಮಿರಾವ್ ರವರ ನೇತೃತ್ವದಲ್ಲಿ ಹಳೇ ಕೋರ್ಟ್ ರಸ್ತೆಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಹೊಸನಗರದ ತಹಶೀಲ್ದಾರ್ ಕಛೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಜನಸಂಖ್ಯೆಯ ಅಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಿರುವುದರಿಂದ ನಮ್ಮ ಕ್ಷೇತ್ರ ನಷ್ಟವಾಗಿದೆ ಈ ಕ್ಷೇತ್ರವನ್ನು ಮರಳಿ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲದು, ಯಾವುದೇ ಪಕ್ಷದವರಾಗಿರಲಿ, ಯಾವುದೇ ಮೀಸಲಾತಿಯವರಾಗಲೀ ಸ್ಪರ್ಧಿಸಲಿ ಹೊಸನಗರಕ್ಕೆ ಕ್ಷೇತ್ರದ ಪ್ರಾತಿನಿಧ್ಯ ಬೇಕು ಅದಕ್ಕಾಗಿ ಯಾವುದೇ ಹೋರಾಟಕ್ಕೂ ತಾಲೂಕಿನ ಜನತೆ ಸಿದ್ದರಾಗಿದ್ದಾರೆ. ಎಲ್ಲಾ ಜಾತಿಯ ಎಲ್ಲಾ ವರ್ಗದ ಸ್ವಾಮಿಜಿಗಳವರು ಚರ್ಚ್ ಹಾಗೂ ಮಸೀದಿಯ ಗುರುಗಳು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಭಾರಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಹೇಳಿದರು.
ನಂತರ ಮಾತನಾಡಿದ ಹೊಸನಗರ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಜನಸಂಖ್ಯೆ ಆಧಾರಿತವಾಗಿ ವಿಧಾನಸಭಾ ಕ್ಷೇತ್ರವನ್ನು ವಿಂಗಡಿಸಿರುವುದು ನಮ್ಮ ಕ್ಷೇತ್ರಕ್ಕೆ ಆಗಿರುವ ಅನ್ಯಾಯ,ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಕ್ಕದ ತಾಲೂಕಿನ ಶಾಸಕರುಗಳಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಮತ್ತು ಸಂಸದರಾದ ಬಿ ವೈ ರಾಘವೇಂದ್ರ ರವರು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಈ ಹೋರಾಟವು ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ.ಆದಷ್ಟು ಬೇಗ ನಮ್ಮ ಮನವಿಯನ್ನು ಪರಿಗಣಿಸಿ ಹೊಸನಗರ ವಿಧಾನಸಭಾ ಕ್ಷೇತ್ರ ಮಾಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ,ತಾಲೂಕು ಬಿಜೆಪಿ ಅಧ್ಯಕ್ಷರಾದ ಗಣಪತಿ ಬೆಳಗೋಡು,ಎನ್ ಆರ್ ದೇವಾನಂದ್,ಆನಂದ್ ಮೆಣಸೆ,ತ ಮ ನರಸಿಂಹ,ಎಂ ಡಿ ಉಸ್ಮಾನ್ ಸಾಬ್,ಎ ವಿ ಮಲ್ಲಿಕಾರ್ಜುನ್,ಶ್ರೀಪತಿ,ರಾಜೇಂದ್ರ ಗಂಟೆ,ದೇವರ ಸಲಿಕೆ ಉಮೇಶ್,ವೆಂಕಟಪ್ಪ ಬಾವಿ ಕೈ,ರಾಜೇಶ್ ಜೈನ್ ಹಾಗೂ ಇನ್ನು ಮುಂತಾದವರು ಪಾಲ್ಗೊಂಡಿದ್ದರು.
ವರದಿ : ಪುಷ್ಪಾ ಜಾಧವ್
ಪ್ರತಿಭಟನೆಯ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇