ರಾಜ್ಯದ ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಕೊರತೆಯಿಂದ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಮಲೆನಾಡಿನ ಮಹಿಳೆಯರು ಹೊಸದೊಂದು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆ.
ತುಮರಿ ಗ್ರಾಪಂ ವ್ಯಾಪ್ತಿಯ ಮಾರಲಗೋಡು ಗ್ರಾಮದ ಯುವತಿ ಆನ್ ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಮೊಬೈಲ್ ಅನ್ನು ಅವಲಂಬಿಸಿದ್ದಳು.ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕದ ಸಮಸ್ಯೆಯಿಂದಾಗಿ ತರಗತಿಗಳಿಗೆ ಹಾಜರಾಗುವುದೇ ದುಸ್ತರವಾಗಿತ್ತು.
ಹೀಗಾಗಿ ಇಂಟರ್ನೆಟ್ ಸಂಪರ್ಕ ಸಿಗುವ ಪ್ರದೇಶಕ್ಕಾಗಿ ಮನೆಯಿಂದ ಹೊರಗೆ ಹುಡುಕಬೇಕಾಗಿದ್ದಿತು. ಈ ವೇಳೆ ಯುವತಿಯನ್ನು ಓರ್ವ ಯುವಕ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಹೊಂಚು ಹಾಕಿ ಯುವತಿಯ ಮೊಬೈಲನ್ನು ಎಗರಿಸಿ ಪರಾರಿಯಾಗಿದ್ದಾನೆ.
ಗ್ರಾಮೀಣ ಭಾಗದ ಯುವತಿಯರು, ಮಹಿಳೆಯರು ನೆಟ್ವರ್ಕ್ ಗಾಗಿ ನಿರ್ಜನ ಪ್ರದೇಶಗಳಲ್ಲಿ ಅಡ್ಡಾಡುವ ಪರಿಸ್ಥಿತಿ ಬಂದೊದಗಿರುವುದು ನಮ್ಮ ಮಲೆನಾಡಿಗೆ ಶಾಪವಾಗಿ ಪರಿಣಮಿಸಿದೆ.