ಕಾಡುಹಂದಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ನಡೆದಿದೆ.
ಹೆಡದಾಳು ಗ್ರಾಮದ ಮಧುಕುಮಾರ್, ಈರೇಶ ಜಯಪ್ಪ, ಕೃಷ್ಣ, ವಿಜಯ ಕುಮಾರ್ ಬಂಧಿತ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷ್ಮೀಪುರ ಸಮೀಪದ ಲಕ್ಯಾ ಕ್ರಾಸ್ ಬಳಿ ಆಲ್ಟೋ ಕಾರನ್ನು ತಡೆದು ಶೋಧಿಸಿದಾಗ ಕಾಡು ಹಂದಿ ಮಾಂಸ ಪತ್ತೆಯಾಗಿದ್ದು, ಬಂಧಿತರಿಂದ 23 ಕೆಜಿ ಮಾಂಸ, ಬಂದೂಕು, ಸಜೀವ ಗುಂಡುಗಳು, ಕತ್ತಿ ಇತರೆ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.