w
Headlines
Home » ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ :

ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ :

ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗ ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ತುಂಗಾ ನಗರ ನಿವಾಸಿ ಮಹಮ್ಮದ್ ತಬಾರಕ್ ವುಲ್ಲಾ ಎಂಬ ವ್ಯಕ್ತಿಯು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರದ ಕೆಕೆ ಶೆಡ್ ನ ಹತ್ತಿರ ಖಾಲಿ ಸ್ಥಳದಲ್ಲಿ ತಾನು ಸಂಗ್ರಹಿಸಿ ಇಟ್ಟಿದ್ದ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.
ನಂತರ ಆರೋಪಿಯಾದ ಮಹಮ್ಮದ್ ತಬಾರಕ್ ವುಲ್ಲಾ , 21 ವರ್ಷ, ಕೆಳಗಿನ ತುಂಗಾನಗರ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 35,000/- ರೂ ಗಳ ಒಟ್ಟು 910 ಗ್ರಾಂ ಒಣ ಗಾಂಜಾ ಮತ್ತು ರೂ 200/- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತನ ವಿರುದ್ಧ ಗುನ್ನೆ ಸಂಖ್ಯೆ 0235/2022 ಕಲಂ 20(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.