Headlines

ಅರಸಾಳು ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ|ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳ|Accident

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಇಂದು ಬೆಳಿಗ್ಗೆ ಅರಸಾಳು ಸಮೀಪದ 9ನೇ ಮೈಲಿಕಲ್ಲು ಬಳಿ ಈ ಘಟನೆ ಸಂಭವಿಸಿದೆ.




ರಿಪ್ಪನ್ ಪೇಟೆ – ಆಯನೂರು ಮಾರ್ಗ ಮಧ್ಯೆಯ 9ನೇ ಮೈಲಿಕಲ್ಲು ಬಳಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆಯ ಬಲ ಭಾಗಕ್ಕೆ ಬಂದು ಪಲ್ಟಿಯಾಗಿದೆ. ಲಾರಿ ಶಿವಮೊಗ್ಗದ ಕಡೆಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.




ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ ರಕ್ಷಣಾ ಕಾರ್ಯ ನಡೆಸುತಿದ್ದಾರೆ.

About The Author

Leave a Reply

Your email address will not be published. Required fields are marked *