ಭದ್ರಾ ಜಲಾಶಯದ ನಾಲ್ಕು ಗೇಟ್ ಗಳು ಓಪನ್ | bhadra Dam
ಭದ್ರಾ ಜಲಾಶಯ ಗರಿಷ್ಠ ಮಟ್ಟಕ್ಕೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತಲಾಗಿದೆ.
ಇಂದು ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ಓಪನ್ ಮಾಡಲಾಯಿತು ನೀರು ಬಿಡುವ ವಿಷಯ ತಿಳಿಯುತಿದ್ದಂತೆ ವಿವಿಧೆಡೆಯ ಜನರು ಜಲಾಶಯದ ಮುಂದೆ ಆಗಮಿಸಿದ್ದರು. ಪ್ರತಿ ಗೇಟ್ ಮೇಲೆತ್ತಿದಾಗಲೂ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಇವತ್ತು ಭದ್ರಾ ಜಲಾಶಯಕ್ಕೆ 20,774 ಕ್ಯೂಸೆಕ್ ಒಳ ಹರಿವು ಇದೆ. ಈಗ 6 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ. ಮಧ್ಯಾಹ್ನದ ವೇಳೆಗೆ ಹೊರ ಹರಿವು 30 ಸಾವಿರ ಕ್ಯೂಸೆಕ್‌ವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಜಲಾಶಯ ನೀರಿನ ಮಟ್ಟ 183.2 ಅಡಿ ಇದೆ.