w
Headlines
Home » ಗರ್ತಿಕೆರೆ ಬಳಿ ಕಾರು ಹಾಗೂ ಬೈಕ್‌ ನಡುವೆ ಅಪಘಾತ – ಬೈಕ್ ಸವಾರನ ಸ್ಥಿತಿ ಗಂಭೀರ,ಮೆಗ್ಗಾನ್ ಗೆ ದಾಖಲು|accident

ಗರ್ತಿಕೆರೆ ಬಳಿ ಕಾರು ಹಾಗೂ ಬೈಕ್‌ ನಡುವೆ ಅಪಘಾತ – ಬೈಕ್ ಸವಾರನ ಸ್ಥಿತಿ ಗಂಭೀರ,ಮೆಗ್ಗಾನ್ ಗೆ ದಾಖಲು|accident

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ಕಾರು ಹಾಗು ಬೈಕ್ ನಡುವೆ ಅಪಘಾತ ನಡೆದಿದೆ.




ಪೆಟ್ರೋಲ್ ಬಂಕ್ ಮುಂಭಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.


ರಿಪ್ಪನ್‌ಪೇಟೆ ಮೂಲದ ಮಾರುತಿ ಬ್ರೀಜಾ(KA 15 N 8990) ಕಾರು ತೀರ್ಥಹಳ್ಳಿ ಕಡೆಗೆ ಸಂಚರಿಸುತ್ತಿದ್ದು ಈ ವೇಳೆ ರಸ್ತೆಗೆ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿದ್ದು ಈ ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.




ಕುಂಬಾರುಕೊಪ್ಪ ನಿವಾಸಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.