ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ – ಸೂಕ್ತ ತನಿಖೆಗೆ ಕರವೇ ಒತ್ತಾಯ
ಶಿವಮೊಗ್ಗ: ರೈಲ್ವೆ ಇಲಾಖೆ ಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರು ಲಕ್ಷಾಂತರ ರೂ. ವಂಚಿಸಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಆಂಟಿ ಕ್ರೈಮ್ ಮತ್ತು ಹೂಮನ್ ರೈಟ್ಸ್ ಆಫ್ ಇಂಡಿಯಾ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಪ್ರಮುಖರಾದ ರಹೀಮ್ ಹಾಗೂ ಸಮಾಜ ಸೇವಕಿ ಸೀಮಾ ಸೆರಾವೊ ತೆಂಡುಲ್ಕರ್ ಆರೋಪಿಸಿದ್ದಾರೆ.
ರಿಪ್ಪನ್‌ಪೇಟೆಯ 37 ವರ್ಷದ ಶ್ವೇತಾಶ್ರೀ ಎಂಬ ಮಹಿಳೆ ತಾನು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿ ಎಂದು ಹೇಳುತ್ತಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರಗ ಜ್ಞಾನೇಂದ್ರ ಸೇರಿದಂತೆ ಗಣ್ಯರೊಂದಿಗೆ ತೆಗೆದ ಛಾಯಾಚಿತ್ರ ತೋರಿಸಿ ಅನೇಕ ಅಮಾಯಕ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಮತ್ತು ರೈಲ್ವೆ ಇಲಾಖೆಯ ಟೆಂಡರ್ ಕೊಡಿಸುವು ದಾಗಿ ಹೇಳಿ ಅವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ.
ತನ್ನ ಪತಿ ಪ್ರಶಾಂತ್ ದೇಶ ಪಾಂಡೆ ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತಿದ್ದು, ಸುಳ್ಳು ಹೇಳಿ ಅವರ ನಕಲಿ ಐಡಿ ತೋರಿಸಿ ಆದರ್ಶ ಕೊಪ್ಪ ಹಾಗೂ ಶಿವಮೊಗ್ಗ ಮಲವಗೊಪ್ಪದ ನಿವಾಸಿ ನವೀನ್ ಮತ್ತು ತೀರ್ಥ ಹಳ್ಳಿಯ ಅರ್ಜುನ್ ಇವರಿಗೆ ಸುಮಾರು 14 ಲಕ್ಷರೂ. ವಂಚಿಸಿ ದ್ದಾರೆ. ಅಲ್ಲದೆ ಬಾಗಲಕೋಟೆ, ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಮತ್ತು ಹುಬ್ಬಳ್ಳಿ ಠಾಣೆಯಲ್ಲಿ ಇವರ ವಿರುದ್ಧ ಈಗಾಗಲೇ ವಂಚನೆ ಪ್ರಕರಣದ ಎಫ್‌ಐಆರ್ ದಾಖಲಾ ಗಿದೆ. ಇವರು ರಿಪ್ಪನ್ ಪೇಟೆಯಲ್ಲಿ ಗಾರ್ಮೆಂಟ್ಸ್ ಮತ್ತು ಬ್ಯೂಟಿಷಿ ಯನ್ ಆಗಿ ಕೆಲಸ ಮಾಡುತ್ತಿದ್ದು, ನಿಶಾಂಕ್ ಎನ್ನುವ ಬಿಬಿಎಂಪಿ ಅಧಿಕಾರಿ ಕೂಡ ತನ್ನ ಪತಿ ಎಂದು ಕೆಲವರಿಗೆ ನಂಬಿಸಿ ಅವರಿಂದಲೂ ಹಣ ಪೀಕಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಲಾಗಿದೆ.
ರಕ್ಷಣಾ ವೇದಿಕೆ ಮತ್ತು ಹೂಮನ್ ರೈಟ್ಸ್ ಇಂಡಿಯಾ ಸಂಸ್ಥೆ ಕಾರ್ಯಕರ್ತರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ನಂತರ ದೂರು ದಾಖಲಾಗಿದೆ.ಆದರೆ ಶ್ವೇತಾಶ್ರೀ ಮತ್ತು ಪ್ರಶಾಂತ್ ದೇಶಪಾಂಡೆ ನಾಪತ್ತೆಯಾಗಿದ್ದಾರೆ. ಇದರ ಹಿಂದೆ ದೊಡ್ಡ ಜಾಲವಿದ್ದು, ರಾಜ್ಯದ ಹಲವೆಡೆ ಜನರಿಗೆ ಮೋಸ ಮಾಡಿದ್ದು ಬೆಳಕಿಗೆ ಬರುತ್ತಿದೆ. ನಕಲಿ ಐಡಿ ತೋರಿಸಿ ವಿವಿಧ ರೀತಿಯಲ್ಲಿ ಅಮಾಯಕರನ್ನು ವಂಚಿಸುತ್ತಾ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ. ಕೆಲವರಿಗೆ ಉದ್ಯೋಗದ ನಕಲಿ ಆದೇಶ ಪತ್ರವನ್ನು ಕೂಡ ನೀಡಿ ಹಣ ಪೀಕಿದ್ದಾರೆ.
ಆದ್ದರಿಂದ ಈ ವಂಚಕರ ಇಡೀ ತಂಡವನ್ನು ಬೇಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಹಾಗೂ ಅಮಾಯಕ ಯುವಕರಿಗೆ ನ್ಯಾಯ ಒದಗಿಸುವಂತೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ನೇಷನ್ ಆಂಟಿ ಕ್ರೈಮ್ ಮತ್ತು ಹೂಮನ್ ರೈಟ್ಸ್ ಆಫ್ ಇಂಡಿಯಾ ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಾಘವೇಂದ್ರ, ಸತೀಶ್, ಶ್ರೀಕಾಂತ್ ಹಾಗೂ ವಂಚನೆಗೊಳಗಾದ ನವೀನ್, ಆದರ್ಶ್, ಅರ್ಜುನ್ ಮತ್ತಿತರರಿದ್ದರು