ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ

Thirthahalli sisters Ganavi and Pavani secured first place in the U-19 girls chess tournament held in Shivamogga and qualified for the Karnataka state-level competition.

ತೀರ್ಥಹಳ್ಳಿ: ಶಿವಮೊಗ್ಗದಲ್ಲಿ ಆಗಸ್ಟ್ 17ರಂದು ನಡೆದ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಆಯೋಜಿಸಿದ್ದ ಯು-19 ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ತೀರ್ಥಹಳ್ಳಿಯ ಸಹೋದರಿಯರಾದ ಗಾನವಿ ಹಾಗೂ ಪಾವನಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ತೀರ್ಥಹಳ್ಳಿ ಪಟ್ಟಣದ ಶಿಲ್ಪಾ ಹಾಗೂ ರೇವಣ್ಣ ಸ್ವಾಮಿ ದಂಪತಿಯ ಪುತ್ರಿಯರಾದ ಗಾನವಿ ಮತ್ತು ಪಾವನಿ, ಪಟ್ಟಣದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಚೆಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಹೋದರಿಯರ ರಾಜ್ಯಮಟ್ಟದ ಆಯ್ಕೆ ತೀರ್ಥಹಳ್ಳಿ ಪಟ್ಟಣಕ್ಕೆ ಹೆಮ್ಮೆ ತಂದಿದೆ. ಇವರ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

About The Author