w
Headlines
Home » ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ

ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ

Screenshot 2026 08 17 19 16 59 453 com.picsart.studio edit

ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ

Three youths rescued a mother and her daughter who attempted suicide by jumping into the Varada River near Chandragutti in Soraba, Shivamogga.

ಸೊರಬ: ಕುಟುಂಬ ಕಲಹದಿಂದ ಮನನೊಂದು ತನ್ನ ಸಣ್ಣ ಮಗಳೊಂದಿಗೆ ವರದಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಮೂವರು ಯುವಕರು ಸಮಯಪ್ರಜ್ಞೆ ಮೆರೆದು ರಕ್ಷಿಸಿರುವ ಘಟನೆ ಚಂದ್ರಗುತ್ತಿ ಸಮೀಪ ನಡೆದಿದೆ.

ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮಗಳೊಂದಿಗೆ ಚಂದ್ರಗುತ್ತಿ ಸಮೀಪದ ವರದಾ ನದಿಯ ದಡಕ್ಕೆ ತೆರಳಿದ್ದರು. ಈ ವೇಳೆ ಮಹಿಳೆ ಮಗುವನ್ನು ನೀರಿಗೆ ತಳ್ಳಲು ಯತ್ನಿಸಿದ್ದು, ಮಗು ಜೋರಾಗಿ ಚೀರಿಕೊಂಡಿದೆ.

ಮಗುವಿನ ಆಕ್ರಂದನ ಕೇಳಿದ ಸ್ಥಳೀಯರು ನೆರವಿಗೆ ಧಾವಿಸಿದ್ದು, ಇದೇ ವೇಳೆ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಚಿಕ್ಕಮಾಕೊಪ್ಪ ಗ್ರಾಮದ ಸಾಹಿಲ್, ಸೋನು ಹಾಗೂ ಯಾಸಿನ್ ಎಂಬ ಮೂವರು ಯುವಕರು ತಕ್ಷಣ ನದಿಗೆ ಧುಮುಕಿದ್ದಾರೆ. ಅಪಾಯದಲ್ಲಿದ್ದ ತಾಯಿ ಹಾಗೂ ಮಗಳಿಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತಂದು ಜೀವ ಉಳಿಸಿದ್ದಾರೆ.

ಯುವಕರ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಮೆಚ್ಚಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸೊರಬ ಪೊಲೀಸ್ ಠಾಣೆಯ ವತಿಯಿಂದ ಮೂವರನ್ನೂ ಗೌರವಿಸಿ ಸನ್ಮಾನಿಸಲಾಯಿತು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.