ಹೊಸನಗರ : ಪಟ್ಟಣದ ಕೆಇಬಿ ಸರ್ಕಲ್ ನಲ್ಲಿ ಟ್ಯಾಂಕರ್ ಹಾಗೂ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ.
ಮಂಗಳೂರಿನಿಂದ ಶಿವಮೊಗ್ಗ ಕಡೆ ಹೋಗುತಿದ್ದ ಟ್ಯಾಂಕರ್ ಹೊಸನಗರದಿಂದ ಸುತ್ತ ತೆಂಕಬೈಲ್ ಕಡೆಗೆ ಹೋಗುತ್ತಿದ್ದ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಶುಕ್ರವಾರ ರಾತ್ರಿ ಕೆಇಬಿ ಎದುರು ತಿರುವಿನಲ್ಲಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಟ್ಯಾಂಕ್ ಬೈಲ್ ಲೋಕಪ್ಪ ಗೌಡ ಹಾಗೂ ಇನ್ನಿಬ್ಬರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಗಾಯಾಳುಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಶಿವಮೊಗ್ಗ ಮೆಗ್ಗನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಸವಾರರ ಕಾಲುಗಳು ಜಖಂಗೊಂಡಿರುವದಾಗಿ ತಿಳಿದುಬಂದಿದೆ.
ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.