Headlines

ಆರು ಕಾಲಿನ ಕರುವಿಗೆ ಜನ್ಮ ನೀಡಿದ ಹಸು! ಶಿವಮೊಗ್ಗದಲ್ಲೊಂದು ಅಪರೂಪದ ಘಟನೆ

ಆರು ಕಾಲಿನ ಕರುವಿಗೆ ಜನ್ಮ ನೀಡಿದ ಹಸು! ಶಿವಮೊಗ್ಗದಲ್ಲೊಂದು ಅಪರೂಪದ ಘಟನೆ

A rare incident in Shivamogga where a cow gave birth to a six-legged calf has stunned locals, drawing crowds and raising curiosity about genetic anomalies in animals.

ಶಿವಮೊಗ್ಗ: ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಹಸುವೊಂದು ಜನ್ಮ ನೀಡಿದ ಅಪರೂಪದ  ತಾಲೂಕಿನ ಸೂಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

ಸೂಗೂರಿನ ಹನುಮಂತಪ್ಪ ಅವರ ಮನೆಯ ಹಸುವಿಗೆ ಮಂಗಳವಾರ ಜನಿಸಿರುವ ಕರುವಿಗೆ ನಾಲ್ಕು ಕಾಲುಗಳ ಬದಲಿಗೆ ಆರು ಕಾಲುಗಳಿದ್ದು, ಈ ಸುದ್ದಿ ಹರಡುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರು ಬಂದು ಕರುವನ್ನು ನೋಡಿಕೊಂಡು ಹೋಗುತ್ತಿದ್ದಾರೆ.

ಈ ಕರುವಿಗೆ ಹೆಚ್ಚುವರಿಕಾಲುಗಳಿದ್ದು, ವಿಶೇಷವಾಗಿ ಕಾಣುತ್ತಿದೆ. ಹೆಚ್ಚುವರಿ ಕಾಲುಗಳಿಂದ ಕೂಡಿರುವ ಈ ಕರು ಜನರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಹಸುಗಳು ನಾಲ್ಕು ಕಾಲಿನ ಕರುವಿಗೆ ಜನ್ಮ ನೀಡುತ್ತವೆ. ಆದರೆ, ತೀರಾ ಅಪರೂಪ ಎಂಬಂತೆ ಆರು ಕಾಲಿನ ಕರುವನ್ನು ಹಾಕಬಹುದು. ಈ ರೀತಿಯ ಘಟನೆಗಳು ಸಾಮಾನ್ಯವಾಗಿ ಅನುವಂಶೀಯ ವ್ಯತ್ಯಾಸಗಳಿಂದ ಸಂಭವಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಹಸುಗಳು ಎರಡು ಕಾಲು, ಎರಡು ತಲೆ ಅಥವಾ ಒಂದೇ ಬಾರಿ ಮೂರು-ನಾಲ್ಕು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸುದ್ದಿಗಳು ವರದಿಯಾಗಿವೆ ಎಂದು ಎಂದು ಪಶು ವೈದ್ಯಾಧೀಕಾರಿ ತಿಳಿಸಿದ್ದಾರೆ.

About The Author