w
Headlines
Home » ದ್ವಿತಿಯ ಪಿಯುಸಿ ಫಲಿತಾಂಶ – ರಿಪ್ಪನ್ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 92% ಫಲಿತಾಂಶ

ದ್ವಿತಿಯ ಪಿಯುಸಿ ಫಲಿತಾಂಶ – ರಿಪ್ಪನ್ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 92% ಫಲಿತಾಂಶ

Screenshot 2026 04 09 18 38 42 398 com.miui.gallery edit

ದ್ವಿತಿಯ ಪಿಯುಸಿ ಫಲಿತಾಂಶ – ರಿಪ್ಪನ್ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 92% ಫಲಿತಾಂಶ

Rippon Pete College records an impressive 92% result in II PUC exams, with outstanding performances across Science, Commerce, and Arts streams.

ರಿಪ್ಪನ್ ಪೇಟೆ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ರಿಪ್ಪನ್ ಪೇಟೆ ಕಾಲೇಜು ಈ ಬಾರಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು 92% ಫಲಿತಾಂಶ ದಾಖಲಿಸಿದೆ. ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದು, ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 65 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 11 ಮಂದಿ ಡಿಸ್ಟಿಂಕ್ಷನ್, 46 ಮಂದಿ ಪ್ರಥಮ ದರ್ಜೆ, ಇಬ್ಬರು ದ್ವಿತೀಯ ದರ್ಜೆ ಹಾಗೂ ಇಬ್ಬರು ಜಸ್ಟ್ ಪಾಸ್ ಆಗಿದ್ದಾರೆ. ಈ ವಿಭಾಗದಲ್ಲಿ ದಿವ್ಯಶ್ರೀ 569 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದು, ಭೂಮಿಕಾ ಬಿ.ಕೆ 568 ಹಾಗೂ ರಕ್ಷಿತಾ ಯಲ್ಲಪ್ಪ ಛಲವಾದಿ 548 ಅಂಕಗಳೊಂದಿಗೆ ಮುಂದಿನ ಸ್ಥಾನಗಳನ್ನು ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10 ಮಂದಿ ಡಿಸ್ಟಿಂಕ್ಷನ್, 57 ಮಂದಿ ಪ್ರಥಮ ದರ್ಜೆ, 10 ಮಂದಿ ದ್ವಿತೀಯ ದರ್ಜೆ ಹಾಗೂ ಒಬ್ಬರು ಜಸ್ಟ್ ಪಾಸ್ ಆಗಿದ್ದಾರೆ. ಈ ವಿಭಾಗದಲ್ಲಿ ವೀಣಾ ಕೆ.ಈ 571 ಅಂಕ (95.1%) ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ಪೂರ್ಣಿಕಾ ಕೆ.ಜೆ 564 ಮತ್ತು ಸುಚಿತ್ರಾ ಎಂ 556 ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 10 ಮಂದಿ ಡಿಸ್ಟಿಂಕ್ಷನ್, 44 ಮಂದಿ ಪ್ರಥಮ ದರ್ಜೆ, 22 ಮಂದಿ ದ್ವಿತೀಯ ದರ್ಜೆ ಹಾಗೂ 5 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಅನುಪಮಾ ಈ 559 ಅಂಕಗಳೊಂದಿಗೆ ಮುಂಚೂಣಿಯಲ್ಲಿದ್ದು, ಸಚಿನ್ ಎನ್.ಎಸ್ 558 ಹಾಗೂ ಉಷಾ ಎಸ್.ಜಿ 537 ಅಂಕಗಳೊಂದಿಗೆ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಸಂತೋಷ ವ್ಯಕ್ತಪಡಿಸಿ, ಶುಭಾಶಯಗಳನ್ನು ತಿಳಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.