w
Headlines
Home » ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

JPEG 20260902 162042

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

A physical education teacher was seriously injured after a discus thrown by a student accidentally hit his head during the Under-17 zonal level sports meet at Chennegowda Stadium in Ripponpete.

ರಿಪ್ಪನ್‌ಪೇಟೆ: ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ದೈಹಿಕ ಶಿಕ್ಷಕರ ತಲೆಗೆ ಬಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ಶಿಕ್ಷಕರನ್ನು ಪಟ್ಟಣದ ಮೇರಿಮಾತಾ ಶಾಲೆಯ ದೈಹಿಕ ಶಿಕ್ಷಕ ಕಮಲಾಕರ್ ಎಂದು ಗುರುತಿಸಲಾಗಿದೆ.

ಕ್ರೀಡಾಕೂಟದ ವೇಳೆ ವಿದ್ಯಾರ್ಥಿಯೊಬ್ಬ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಡಿಸ್ಕಸ್ ಎಸೆದಿದ್ದು, ಅದು ಆಕಸ್ಮಿಕವಾಗಿ ಕ್ರೀಡಾಂಗಣದಲ್ಲಿ ಇದ್ದ ಶಿಕ್ಷಕ ಕಮಲಾಕರ್ ಅವರ ತಲೆಗೆ ಬಿದ್ದಿದೆ. ಪರಿಣಾಮ ಅವರ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿದೆ.

ತಕ್ಷಣವೇ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.