Headlines

ಹಾವು ಕಡಿತಕ್ಕೆ ಎರಡುವರೆ ವರ್ಷದ ಮಗು ಬಲಿ: ಸಾಗರದಲ್ಲಿ ದಾರುಣ ಘಟನೆ

GridArt 20260416

ಹಾವು ಕಡಿತಕ್ಕೆ ಎರಡುವರೆ ವರ್ಷದ ಮಗು ಬಲಿ: ಸಾಗರದಲ್ಲಿ ದಾರುಣ ಘಟನೆ

A tragic incident in Shivamogga’s SN Nagar where a 2.5-year-old boy died after a snake bite while playing outside his house. The child succumbed despite medical treatment at Meggan Hospital.

ಶಿವಮೊಗ್ಗ: ಮನೆಯ ಮುಂಭಾಗದಲ್ಲೇ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿಗೆ ಹಾವು ಕಡಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬುಧವಾರ ಎಸ್.ಎನ್ ನಗರದಲ್ಲಿ ನಡೆದಿದೆ.

ಅಕ್ಷತಾ ಹಾಗೂ ಗಣೇಶ್ ದಂಪತಿಯ ಪುತ್ರ ಭವಿನ್ ಮೃತಪಟ್ಟ ಮಗು ಎಂದು ತಿಳಿದು ಬಂದಿದೆ. ಅಕ್ಷತಾ ಅವರು ಇತ್ತೀಚೆಗೆ ತಮ್ಮ ತವರು ಮನೆಗೆ ಮಗುವಿನೊಂದಿಗೆ ಎಸ್.ಎನ್ ನಗರಕ್ಕೆ ಬಂದಿದ್ದರು.

ಘಟನೆಯ ದಿನ ಭವಿನ್ ತನ್ನ ಅಜ್ಜಿಯ ಮನೆ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿದ್ದನು. ಇದೇ ವೇಳೆ ಅಲ್ಲಿ ಬಂದ ನಾಗರಹಾವು ಮಗುವಿನ ಕೈಗೆ ಕಡಿದಿದೆ. ಮಗು ಅಚಾನಕ್ ಜೋರಾಗಿ ಅಳತೊಡಗಿದನ್ನು ಕೇಳಿ ಮನೆಯವರು ಹೊರಗೆ ಬಂದು ನೋಡಿದಾಗ, ಹಾವು ಅಲ್ಲಿಂದ ಸರಿದು ಹೋಗುತ್ತಿರುವುದು ಗಮನಕ್ಕೆ ಬಂದಿದೆ.

ತಕ್ಷಣ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭವಿನ್ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ.

ಮೃತದೇಹದ ಮರಣೋತ್ತರ ಪರೀಕ್ಷೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯಿತು. ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.