Headlines

ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಆರೋಪ – ಪ್ರಕರಣ ದಾಖಲು

GridArt 20260418

ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಆರೋಪ – ಪ್ರಕರಣ ದಾಖಲು

A case has been registered in Thirthahalli after unknown persons allegedly poisoned a drinking water well in Giniya village near Kuppalli, reportedly due to a land dispute.

ತೀರ್ಥಹಳ್ಳಿ: ತಾಲೂಕಿನ ಕುಪ್ಪಳ್ಳಿ ಸಮೀಪದ ಗಿಣಿಯ ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಆರೋಪದ ಘಟನೆ ಬೆಳಕಿಗೆ ಬಂದಿದೆ.

ಗಿಣಿಯ ಗ್ರಾಮದ ನಿವಾಸಿ ರಾಘವೇಂದ್ರ ಅವರ ಜಮೀನಿನಲ್ಲಿರುವ ಬಾವಿಗೆ ದುಷ್ಕರ್ಮಿಗಳು ವಿಷ ಮಿಶ್ರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮತ್ತು ಕೆಲವರ ನಡುವೆ ನಡೆಯುತ್ತಿದ್ದ ಹಳೆಯ ವೈಷಮ್ಯವೇ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಈ ಹಿಂದೆ ಕೂಡ ರಾಘವೇಂದ್ರ ಅವರ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಅದರಿಂದಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇತ್ತೀಚೆಗೆ ತಮ್ಮ ಜಮೀನಿಗೆ ತೆರಳಿದ ರಾಘವೇಂದ್ರ ಅವರು ಬಾವಿಯ ನೀರಿನಲ್ಲಿ ಅಸಾಮಾನ್ಯವಾದ ವಿಷದ ವಾಸನೆ ಕಂಡು ಅನುಮಾನಗೊಂಡಿದ್ದಾರೆ. ಬಳಿಕ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.