w
Headlines
Home » ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ದುರ್ಮರಣ : ಕುಟುಂಬಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಸಾಂತ್ವಾನ

ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ದುರ್ಮರಣ : ಕುಟುಂಬಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಸಾಂತ್ವಾನ

GridArt 20260328

SSLC student dies after slipping into a pond near Ripponpet. MLA Belur Gopalakrishna visits the bereaved family, offers condolences, and assures compensation.

ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಬರುವೆ ಗ್ರಾಮದ ಗದ್ದೆಯೊಳಗಿನ ಕೆರೆಯಲ್ಲಿ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಮದೀನಾ ಕಾಲೋನಿಯಲ್ಲಿರುವ ಮೃತ ವಿದ್ಯಾರ್ಥಿ ಮಹಮ್ಮದ್ ತಮೀಮ್ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕರು, ಪೋಷಕರಿಗೆ ಧೈರ್ಯ ತುಂಬಿ ದುಃಖ ಹಂಚಿಕೊಂಡರು. ಈ ದುರ್ಘಟನೆಯಿಂದ ತೀವ್ರವಾಗಿ ಕಂಗೆಟ್ಟಿರುವ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸಿದ ಅವರು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.

ಘಟನೆಯ ವಿವರಗಳ ಪ್ರಕಾರ, ಶುಕ್ರವಾರ ಪಟ್ಟಣದ ಚೌಡೇಶ್ವರಿ ಬೀದಿಗೆ ಟ್ಯೂಷನ್‌ಗೆ ತೆರಳಿದ್ದ ತಮೀಮ್, ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆದು ಹೋಗುವಾಗ ಕಾಲುಜಾರಿ ನೀರಿಗೆ ಬಿದ್ದಿದ್ದು, ಈ ದುರ್ಘಟನೆ ಸಂಭವಿಸಿದೆ.

ಮೃತರ ಮನೆಯ ಭೇಟಿ ಸಂಧರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಮುಖಂಡರಾದ ಚೇತನ್ ರಾಜ್, ನಿರೂಪ್ ಕುಮಾರ್, ಆಸೀಫ್ ಭಾಷಾ, ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.