Headlines

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ಭದ್ರತಾ ತಪಾಸಣೆ

Railway Protection Force and local police conducted a joint security inspection at Shivamogga railway station with dog squad and ASC teams checking platforms, ticket counters, parcel office and waiting halls.

ಶಿವಮೊಗ್ಗ : ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಇಂದು ರೈಲ್ವೆ ಭದ್ರತಾ ಪಡೆ (RPF) ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಲಾಯಿತು.

ಅಧಿಕಾರಿಗಳ ಸೂಚನೆಯ ಮೇರೆಗೆ ನಡೆದ ಈ ವಿಶೇಷ ತಪಾಸಣೆಯಲ್ಲಿ ಎಎಸ್‌ಸಿ (ASC) ಸಿಬ್ಬಂದಿ ಹಾಗೂ ಶ್ವಾನ ದಳದ ತಂಡಗಳು ಭಾಗವಹಿಸಿ ನಿಲ್ದಾಣದಾದ್ಯಂತ ಸೂಕ್ಷ್ಮ ಪರಿಶೀಲನೆ ನಡೆಸಿದವು.

ರೈಲ್ವೆ ಪ್ಲಾಟ್‌ಫಾರ್ಮ್‌ಗಳು, ಟಿಕೆಟ್ ಬುಕಿಂಗ್ ಕೌಂಟರ್‌ಗಳು, ಪಾರ್ಸೆಲ್ ಕಚೇರಿ, ವಾಹನ ನಿಲ್ದಾಣ ಹಾಗೂ ಪ್ರಯಾಣಿಕರ ವೇಟಿಂಗ್ ಹಾಲ್ ಸೇರಿದಂತೆ ನಿಲ್ದಾಣದ ಪ್ರತಿಯೊಂದು ಮೂಲೆಯನ್ನೂ ಶೋಧಿಸಲಾಯಿತು. ಪ್ರಯಾಣಿಕರ ಸಾಮಾನುಗಳನ್ನು ಕೂಡ ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತುಗಳಿರುವುದೇ ಎಂಬುದನ್ನು ಅಧಿಕಾರಿಗಳು ಗಮನಿಸಿದರು.

ಸಾರ್ವಜನಿಕರಲ್ಲಿ ಭದ್ರತಾ ಜಾಗೃತಿ ಮೂಡಿಸುವುದರ ಜೊತೆಗೆ ರೈಲು ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಪಾಸಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About The Author