Headlines

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ – ಪಾದಚಾರಿ ಸಾವು

A 60-year-old pedestrian died after being hit by a speeding car near Jambaraghatte close to Holehonnur in Shivamogga. The car lost control, crashed into an electric pole and a coconut tree, and overturned.

ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಜಂಬರಘಟ್ಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಮೃತರನ್ನು ಕಲ್ಲಜ್ಜನಾಳ್ ಗ್ರಾಮದ 60 ವರ್ಷದ ರಾಜಪ್ಪ ಎಂದು ಗುರುತಿಸಲಾಗಿದೆ.

ರಾಜಪ್ಪ ಅವರು ಹೊಳೆಹೊನ್ನೂರು ಕಡೆಯಿಂದ ತಮ್ಮ ಗ್ರಾಮವಾದ ಕಲ್ಲಜ್ಜನಾಳ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಚನ್ನಗಿರಿ ಮಾರ್ಗವಾಗಿ ಶಿವಮೊಗ್ಗದತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಜಪ್ಪ ಅವರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ರಾಜಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಕಾರು ಅದೇ ವೇಗದಲ್ಲಿ ಮುಂದೆ ಹೋಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಮತ್ತು ತೆಂಗಿನ ಮರಕ್ಕೆ ಗುದ್ದಿ ಪಕ್ಕಕ್ಕೆ ಉರುಳಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

About The Author