POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಚಲಿಸುತಿದ್ದ ಬೈಕ್ ಗೆ ಜಿಂಕೆ ಅಡ್ಡ ಬಂದು ಅಪಘಾತ – ಸವಾರನಿಗೆ ಗಂಭೀರ ಗಾಯ

GridArt 20260324

A bike rider suffered serious head injuries after a deer suddenly crossed the road near Varanahonda on Thirthahalli Road in Ripponpet. Locals allege ambulance service delay

ರಿಪ್ಪನ್ ಪೇಟೆ: ಜಿಂಕೆಯೊಂದು ಏಕಾಏಕಿ ದ್ವಿಚಕ್ರ ವಾಹನದ ಮುಂದೆ ಅಡ್ಡ ಬಂದ ಪರಿಣಾಮ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ವರಾನಹೊಂಡ ಬಳಿಯಲ್ಲಿ ನಡೆದಿದೆ.

https://postmannewskannada.com/2026/03/tree-falls-on-bike-heavy-rain-ripponpet-accident.html

ತಳಲೆ ಗ್ರಾಮದ ನಾಗರಾಜ್ (33) ಗಾಯಗೊಂಡ ವ್ಯಕ್ತಿಯಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ನಾಗರಾಜ್ ಅವರು ಇಂದು ಬೆಳಿಗ್ಗೆ ಕಬ್ಬು ಕಡಿಯುವ ಕೆಲಸಕ್ಕಾಗಿ ವಡಗೆರೆ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ವರಾನಹೊಂಡದ ಭೂತರಾಯನ ದೇವಸ್ಥಾನದ ಸಮೀಪದಲ್ಲಿ ಜಿಂಕೆಯೊಂದು ಏಕಾಏಕಿ ರಸ್ತೆಗೆ ಹಾರಿದ ಹಿನ್ನೆಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಸವಾರನ ತಲೆಗೆ ಗಂಭೀರ ಗಾಯವಾಗಿದೆ.

ಅಪಘಾತದ ಬಳಿಕ ಸ್ಥಳೀಯರು ಗಾಯಾಳುವನ್ನು ತಕ್ಷಣವೇ ರಿಪ್ಪನ್ ಪೇಟೆ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗಕ್ಕೆ ರವಾನಿಸಿದ್ದಾರೆ.

ಇದೇ ವೇಳೆ, ಆಂಬುಲೆನ್ಸ್ ಸಂಪರ್ಕ ಸಿಗದ ಹಿನ್ನೆಲೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.