A KFD (Monkey Fever) precautionary review meeting was held at Sonale Gram Panchayat where health officials discussed preventive measures and public safety guidelines.
ಹೊಸನಗರ : ಸೊನಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್ – KFD) ಮುಂಜಾಗ್ರತೆ ಕುರಿತು ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಆರೋಗ್ಯ ಇಲಾಖೆಯ ರಾಜ್ಯ RRT ತಂಡದ ಡಾ. ನಾಗರಾಜ ನಾಯ್ಕ್ ಅವರು ಮಂಗನ ಕಾಯಿಲೆ ಮುಂಜಾಗ್ರತೆ ಕುರಿತು ಮಾತನಾಡಿ, ಕಾಯಿಲೆಯ ಲಕ್ಷಣಗಳು, ಸೋಂಕು ಹರಡುವ ವಿಧಾನ, ಅರಣ್ಯ ಪ್ರದೇಶಗಳಿಗೆ ತೆರಳುವವರು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಲಸಿಕೆ ಪಡೆಯುವ ಮಹತ್ವ ಹಾಗೂ ಟಿಕ್ಗಳಿಂದ ರಕ್ಷಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವಕ್ಷಣಾಧಿಕಾರಿ ಡಾ. ಹರ್ಷವರ್ಧನ, ಶಿವಮೊಗ್ಗ ತಾಲ್ಲೂಕು ವೈದ್ಯಾಧಿಕಾರಿ ಸುರೇಶ್, ಸೊನಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತೌಫಿಕ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೃಷ್ಣಮೂರ್ತಿ ಎಂ., ಸದಸ್ಯರಾದ ಸುಬ್ರಮಣ್ಯ ಎಸ್. ರಾವ್, ಅಂಬಿಕಾ ಎಸ್.ಎನ್ , ಸತೀಶ್ ಎನ್ , ಶಾರದಮ್ಮ, ಹೂವಮ್ಮ, ರಾಘವೇಂದ್ರ ಎನ್.ಎಸ್. ಹಾಗೂ ಕಾರ್ಯ ನಿರ್ವಾಹಣಾಧಿಕಾರಿ ನರೇಂದ್ರ ಅವರು ಉಪಸ್ಥಿತರಿದ್ದರು.
ಸಭೆಗೆ ಅರಣ್ಯ ಇಲಾಖೆ, ಪಶು ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿ.ಡಿ.ಓ. ಭಾನೇಂದ್ರ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಯವರು ಹಾಜರಿದ್ದು, ಸಮನ್ವಯದೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು.
KFD awareness meeting, Monkey Fever precaution, Sonale Gram Panchayat, KFD prevention Karnataka, Kyasanur Forest Disease, Health department meeting Shivamogga













