Headlines

ಕಾಮಿಡಿ‌ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಕುಸಿದು ಬಿದ್ದು ಸಾವು

ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ಕಾಮಿಡಿ ಕಿಲಾಡಿ’ ಸೀಸನ್-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ರಾಕೇಶ್ ಅವರ ಆಕಸ್ಮಿಕ ಸಾವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಕಿರುತೆರೆಯ ಸಹ ಕಲಾವಿದರಿಗೂ ಆಘಾತವನ್ನುಂಟು ಮಾಡಿದೆ.. ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಅವರ ಹಾಸ್ಯ, ಸಹಜತೆ, ಮತ್ತು ಜನರನ್ನು ನಗಿಸುವ ವಿಶಿಷ್ಟ ಶೈಲಿಯಿಂದಾಗಿ ಎಲ್ಲರ ಮನಗೆದ್ದಿದ್ದರು. ಕಾರ್ಯಕ್ರಮದ ಸೀಸನ್-3ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ವಿಜೇತರಾಗಿ ಹೊರಹೊಮ್ಮಿದ್ದ ರಾಕೇಶ್, ಕಿರುತೆರೆಯ…

Read More

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ವಿಧಾನ ಸೌಧದಲ್ಲಿ ಸಭೆ

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ವಿಧಾನ ಸೌಧದಲ್ಲಿ ಸಭೆ ಶರಾವತಿ ಹಾಗೂ ಇನ್ನಿತರೆ ಯೋಜನೆಗಳ ಮುಳುಗಡೆ ಸಂತ್ರಸ್ತರು ಮತ್ತು ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಾಗೂ ಕಂದಾಯ ಭೂ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಮಹತ್ವದ ಸಭೆ ನಡೆಯಿತು. ಸೊಪ್ಪಿನ ಬೆಟ್ಟ, ಕಾನು ಭೂಮಿಗಳ ಅನಧೀಕೃತ ಸಾಗುವಳಿ ಸಕ್ರಮಗೊಳಿಸುವಿಕೆ, ಹಂಗಾಮಿ ಮನೆದಳ ಪತ್ರಗಳನ್ನು ಕಾಯಂಗೊಳಿಸುವುದು, ಕಂದಾಯ ದಾಖಲೆಗಳಲ್ಲಿ ತಪ್ಪಾಗಿ ನಮೂದಿಸಲಾಗಿರುವ ಸೂಚಿತ ಅರಣ್ಯ…

Read More

ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ ಮೆಟ್ರೊದಲ್ಲಿ ಉದ್ಯೋಗವಕಾಶ ಬೆಂಗಳೂರಿನ ಮೆಟ್ರೊ ರೈಲು ಕಾರ್ಪೊರೇಷನ್‌ನಲ್ಲಿ 150 ಮೆಂಟೇನರ್ ಹುದ್ದೆಗಳಿಗಾಗಿ ಐ.ಟಿ.ಐ. ಅಥವಾ ಎನ್‌ಸಿವಿಟಿ/ ಎನ್‌ಸಿಟಿವಿಟಿ/ಎನ್‌ಎಸಿಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷದೊಳಗಿನ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯು 5 ವರ್ಷಗಳಿಗೆ ಗುತ್ತಿಗೆ ಆಧಾರವಾಗಿದ್ದು, ನಂತರ ವೈಯಕ್ತಿಕ ಕಾರ್ಯಕ್ಷಮತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ವೇತನ ₹ 25,000ದಿಂದ ₹ 59,060 (ವಾರ್ಷಿಕ ಬಡ್ತಿ ಶೇ 3) ಮತ್ತು ಬಿಎಂಆರ್‌ಸಿಎಲ್‌ನ…

Read More

ಆತ್ಮಹತ್ಯೆಗೆ ಮುಂದಾದ ಯುವಕನನ್ನು ರಕ್ಷಿಸಿದ 112 ಪೊಲೀಸರು

ಆತ್ಮಹತ್ಯೆಗೆ ಮುಂದಾದ ಯುವಕನನ್ನು ರಕ್ಷಿಸಿದ 112 ಪೊಲೀಸರು ಭದ್ರಾವತಿಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನ 112 ಪೊಲೀಸರು ಬಜಾವ್ ಮಾಡಿರುವ ಘಟನೆ ನಡೆದಿದೆ. ಮೇ.7ರಂದು ಭದ್ರಾವತಿ ವೀರಾಪುರ ಗ್ರಾಮದ ಮಹಿಳೆಯೊಬ್ಬರು ಇ.ಆರ್.ಎಸ್.ಎಸ್ – 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ಮಗ ಮನೆಯ ಬಾಗಿಲು ಹಾಕಿಕೊಂಡು ನೇಣು ಬಿಗುದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆಂದು ದೂರು ಬಂದಿತ್ತು.  ದೂರಿನ ಆಧಾರದ ಮೇರೆಗೆ  ಇ.ಆರ್.ಎಸ್.ಎಸ್ ವಾಹನದ ಅಧಿಕಾರಿಗಳಾದ  ವಿನಯ್ ಕುಮಾರ್ ಸಿಪಿಸಿ – 1618,…

Read More

ಗಾಂಜಾ ಮಾರಾಟ ಮಾಡುತಿದ್ದ ನಾಲ್ವರ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಮಚ್ಚೆ, ದರ್ಶನ್, ಕೇಶವ, ನಾಗರಾಜರನ್ನ ಬಂಧಿಸಲಾಗಿದೆ. ಬಂಧಿತರಿಂದ 1 ಕೆಜಿ 225 ಗ್ರಾಂ ಒಣ ಗಾಂಜಾವನ್ನ ಶಿವಮೊಗ್ಗದ ಸಿಇಎನ್ ಪೊಲಿಸರು ವಶಕ್ಕೆ ಪಡೆಯಲಾಗಿದೆ ಶಿವಮೊಗ್ಗ ತಾಲ್ಲೂಕು ಬೊಮ್ಮನಕಟ್ಟೆ ಯಿಂದ ಬಸವಗಂಗೂರು ಕಡೆ ಹೋಗುವ ರಸ್ತೆಯ ಮಧ್ಯದಲ್ಲಿ  ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ  ಮಾಹಿತಿಯ ಮೇರೆಗೆ ಸಿಇಎನ್ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ದಾಳಿ ನಡೆದಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿರಾದ  1.ಆಕಾಶ ಸಿ @…

Read More

ಶಿವಮೊಗ್ಗ | ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯ ಕೊಲೆ

ಶಿವಮೊಗ್ಗ | ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯ ಕೊಲೆ ಶಿವಮೊಗ್ಗ: ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯೊರ್ವನನ್ನು ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಹೇಮಣ್ಣ(68) ಎಂದು ಗುರುತಿಸಲಾಗಿದೆ. ಹೇಮಣ್ಣರ ಮೇಲೆ ಈ ಹಿಂದೆಯು ದಾಳಿಯಾಗಿತ್ತು.ಆಗ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Read More

11 ಲಕ್ಷ ಹಣದೊಂದಿಗೆ ಪರಾರಿಯಾದ ಅಂಗಡಿಯಲ್ಲಿ ಕೆಲಸಕ್ಕಿದ್ದ ರಾಜಸ್ಥಾನದ ಯುವಕ

11 ಲಕ್ಷ ಹಣದೊಂದಿಗೆ ಪರಾರಿಯಾದ ಅಂಗಡಿಯಲ್ಲಿ ಕೆಲಸಕ್ಕಿದ್ದ ರಾಜಸ್ಥಾನದ ಯುವಕ ಶಿಕಾರಿಪುರ: ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಮಾಲೀಕರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದು, ಆತನ ಸುಳಿವು ಸಿಗದ ಹಿನ್ನೆಲೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ. ಮೇ 2ರಂದು ಮಧ್ಯಾಹ್ನದ ಅಡುಗೆ ಮಾಡುವಂತೆ ಸೂಚಿಸಿ ಸೆಯನ್‌ ಸಿಂಗ್‌ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಎಂಬಾತನಿಗೆ ಮನೆ ಬೀಗ ಕೊಟ್ಟು ಕಳುಹಿಸಿದ್ದರು.ಸಂಜೆ 4 ಗಂಟೆಯಾದರು ಮಹೇಂದ್ರ ಅಂಗಡಿಗೆ ಹಿಂತಿರುಗಿರಲಿಲ್ಲ. ಕರೆ ಮಾಡಿದಾಗ…

Read More

ಕೃಷಿ ಇಲಾಖೆಯಲ್ಲಿ ಖಾಲಿಯಿರುವ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆಯಲ್ಲಿ ಖಾಲಿಯಿರುವ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಶಿವಮೊಗ್ಗ: ಜಿಲ್ಲೆಯಲ್ಲಿ 2025-26 ನೇ ಸಾಲಿಗೆ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಹೊಸನಗರ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ಜಂಟಿ ನಿರ್ದೇಶಕರ ಕಛೇರಿ, ಶಿವಮೊಗ್ಗದಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್/ಅಪರೇಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೃಷಿ ಪದವಿ ಜೊತೆಗೆ 5 ವರ್ಷ ಎ.ಟಿ.ಎಂ ಆಗಿ ಸೇವೆ ಸಲ್ಲಿಸಿರಬೇಕು….

Read More

ಭಾರತ – ಪಾಕಿಸ್ಥಾನ ಯುದ್ದ ಹಿನ್ನಲೆ – IPL ಲೀಗ್ ರದ್ದು | ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ

ಭಾರತ – ಪಾಕಿಸ್ಥಾನ ಯುದ್ದ ಹಿನ್ನಲೆ – IPL ಲೀಗ್ ರದ್ದು | ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ ಐಪಿಎಲ್‌ ವಿಶ್ವದ ಅತ್ಯಂತ ದೊಡ್ಡ ಲೀಗ್‌ ಆಗಿದೆ. ಈ ಬಾರಿ ಅಂದರೆ 18ನೇ ಸೀಸನ್ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ನಡುವೆಯೇ ಪೆಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು ಅಮಾಯಕರ ಬಲಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಕೂಡ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಪಾಕ್‌ಗೆ ಸೂಕ್ತ ಪ್ರತ್ಯುತ್ತರ ನೀಡಿತ್ತು. ಅಷ್ಟಕ್ಕೂ ಸುಮ್ಮನಾಗದ ಪಾಕಿಸ್ತಾನ ಮತ್ತೆ…

Read More

RIPPONPETE | ಜಂಬಳ್ಳಿ ತಿರುವಿನಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ – ಪಟ್ಟಣದ ಎಗ್ ರೈಸ್ ಅಂಗಡಿ ಮಾಲೀಕ ಸಾವು

RIPPONPETE | ಜಂಬಳ್ಳಿ ತಿರುವಿನಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ – ಪಟ್ಟಣದ ಎಗ್ ರೈಸ್ ಅಂಗಡಿ ಮಾಲೀಕ ಸಾವು RIPPONPETE | ಜಂಬಳ್ಳಿ ತಿರುವಿನಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ – ಪಟ್ಟಣದ ಎಗ್ ರೈಸ್ ಅಂಗಡಿ ಮಾಲೀಕ ಸಾವು ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ಬಸ್ ನಿಲ್ದಾಣದ ತಿರುವಿನಲ್ಲಿ ಬೊಲೆರೋ ಪಿಕಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ…

Read More