Headlines

ಫೇಸ್ಬುಕ್ ವೀಡಿಯೋ ವಿವಾದ – ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಯ್ತು ಪ್ರತ್ಯೇಕ ಎರಡು ದರೋಡೆ ಪ್ರಕರಣ

ಫೇಸ್ಬುಕ್ ವೀಡಿಯೋ ವಿವಾದ -ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಯ್ತು ಎರಡು ಪ್ರತ್ಯೇಕ ದರೋಡೆ ಪ್ರಕರಣ

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣವಾದ ಪೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ ಒಂದು ವೀಡಿಯೋಗೆ ಸಂಬಂಧಿಸಿದಂತೆ ಉಂಟಾದ ಗಲಾಟೆಯು ಎರಡು ಪ್ರತ್ಯೇಕ ದರೋಡೆ ಪ್ರಕರಣ ದಾಖಲಾಗುವ ಮೂಲಕ ಅಂತ್ಯಗೊಂಡಿರುವ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ನಿವಾಸಿ ಶ್ವೇತಾ ಆಚಾರ್ಯ ಎಂಬುವವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ದ ಬಿಎನ್ ಎಸ್ 309(6) ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು , ಇನ್ನೊಂದು ಪ್ರಕರಣದಲ್ಲಿ ಪಟ್ಟಣದ ನಿವಾಸಿ ಲೇಖನಾ ಚಂದ್ರನಾಯ್ಕ್ ನೀಡಿದ ದೂರಿನ ಮೇರೆಗೆ BNS 309(6) ಕಾಯ್ದೆ ಅಡಿಯಲ್ಲಿ ಮತ್ತೊಂದು ಮತ್ತೊಂದು ದರೋಡೆ ಪ್ರಕರಣ ದಾಖಲಾಗಿದೆ.

ಶ್ವೇತಾ ಆಚಾರ್ಯ ನೀಡಿರುವ ದೂರಿನಲ್ಲೇನಿದೆ..!!??

ಶಿವಮೊಗ್ಗ ರಸ್ತೆಯಲ್ಲಿರುವ ಶ್ವೇತಾಶ್ರೀ ಗಾರ್ಮೆಂಟ್ಸ್ ಮತ್ತು ಬ್ಯೂಟಿ ಪಾರ್ಲರ್ ಗೆ ತೆರಳಿದಾಗ ಶುಕ್ರವಾರ ಮಧ್ಯಾಹ್ನ ನಾನು ಊಟಕ್ಕೆ ತೆರಳಿದ್ದಾಗ ಪಟ್ಟಣದ ನಿವಾಸಿಗಳಾದ ಲೇಖನಾ ಚಂದ್ರನಾಯ್ಕ್ , ಶಶಿಕಲಾ ಸುರೇಶ್ , ಸೀಮಾ ಸೆರವೋ ಹಾಗೂ ಚಂದ್ರನಾಯ್ಕ್ ಏಕಾಏಕಿ ದೊಣ್ಣೆಗಳೊಂದಿಗೆ ನುಗ್ಗಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಅಂಗಡಿಯಲ್ಲಿದ್ದ 37 ಗ್ರಾಂ ತೂಕದ ಮಾಂಗಲ್ಯಸರ , 6ಗ್ರಾಂ ಸರ , 5ಗ್ರಾಂ ಉಂಗುರ ಹಾಗೂ 3 ಗ್ರಾಂ ಓಲೆಯನ್ನು ಸಿಬ್ಬಂದಿಗಳಿಗೆ ಹೆದರಿಸಿ ಕಿತ್ತುಕೊಂಡು ಹೋಗಿದ್ದಾರೆ ಎಂದು ಶ್ವೇತಾ ಎಂಬುವವರು ದೂರು ಸಲ್ಲಿಸಿದ್ದಾರೆ.

ಲೇಖನ ಚಂದ್ರನಾಯ್ಕ್ ದೂರಿನಲ್ಲೇನಿದೆ..!!??

ಸಾಮಾಜಿಕ ಜಾಲತಾಣ ಪೇಸ್ಬುಕ್ ನಲ್ಲಿ ಪಟ್ಟಣದ ಶ್ವೇತಾ ಆಚಾರ್ಯ ಎಂಬುವವರು ಗುರುವಾರ ರಾತ್ರಿ 9 ಗಂಟೆಗೆ ಪೇಸ್ಬುಕ್ ಲೈವ್ ಬಂದು ತನ್ನ ಹಾಗೂ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಪ್ರಶ್ನಿಸಲು ಶುಕ್ರವಾರ ಮಧ್ಯಾಹ್ನ ಶಿವಮೊಗ್ಗ ರಸ್ತೆಯಲ್ಲಿರುವ ಶ್ವೇತಾ ರವರ ಬ್ಯೂಟಿ ಪಾರ್ಲರ್ ಗೆ ಹೋದಾಗ ಶ್ವೇತಾ , ತೇಜಸ್ , ಅಂಜನ್ ಕುಮಾರ್ ಹಾಗೂ ಕಾವ್ಯ ಎಂಬುವವರು ಏಕಾಏಕಿ ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾಗಿ ಕೆಳಗೆ ಬೀಳಿಸಿದ್ದು ಈ ಸಂಧರ್ಭದಲ್ಲಿ 42 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಅದನ್ನು ಅಲ್ಲಿದ್ದ ಅಂಜನ್ ಕುಮಾರ್ ಎಂಬುವವರು ತೆಗೆದುಕೊಂಡಿದ್ದಾರೆ ಆನಂತರದಲ್ಲಿ ಮೇಲ್ಕಂಡ ನಾಲ್ವರು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ಘಟನೆಯ ಹಿನ್ನಲೆ :

ರಿಪ್ಪನ್‌ಪೇಟೆ ಪಟ್ಟಣದ ಶ್ವೇತಾ ಆಚಾರ್ಯ ಎಂಬುವವರು ತಮ್ಮ ಪೇಸ್ಬುಕ್ ಖಾತೆಯಲ್ಲಿ ಲೈವ್ ಬಂದು ತಮ್ಮ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಪಟ್ಟಣದ ಲೇಖನ ಚಂದ್ರನಾಯ್ಕ್ , ಶಶಿಕಲಾ ಸುರೇಶ್ ಹಾಗೂ ಸೀಮಾ ಸೆರವೋ ಶುಕ್ರವಾರ ಮಧ್ಯಾಹ್ನ ದೂರು ಸಲ್ಲಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುಂದುವರಿದ ಪ್ರಕರಣ ಎರಡು ಪ್ರತ್ಯೇಕ ದರೋಡೆ ಕೇಸ್ ದಾಖಲಿಸುವ ಹಂತಕ್ಕೆ ತಲುಪಿದೆ. ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದು ಸತ್ಯಾಂಶ ತನಿಖೆಯ ನಂತರ ಹೊರಬೀಳಬೇಕಾಗಿದೆ.