ಪಿಯು ಕಾಲೇಜು ಉಪನ್ಯಾಸಕರ ಕಾರ್ಯಗಾರ – ಉಪನ್ಯಾಸಕರುಗಳಿಗೆ ಸಮಯ ಪಾಲನೆ ಮತ್ತು ಶಿಸ್ತು ಅಗತ್ಯ : ಚಂದ್ರಪ್ಪ ಗುಂಡಪಲ್ಲಿ
ರಿಪ್ಪನ್ ಪೇಟೆ: 21ನೇ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯಗಳನ್ನು ಪರಿಶೀಲಿಸುತ್ತಾರೆ, ಉಪನ್ಯಾಸಕರುಗಳು ಸಮಯ ಪಾಲನೆ ಮತ್ತು ಶಿಸ್ತು ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ ಹಾಗೆಯೇ ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಕಾರಣಭೂತರಾಗುತ್ತಾರೆ ಎಂದು ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಗುಂಡಪಲ್ಲಿ ಹೇಳಿದರು.
ಅಮೃತ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಸನಗರ ತಾಲೂಕು ಉಪನ್ಯಾಸ್ತರ ಸಂಘ ಹಾಗೂ ಪ್ರಾಚಾರ್ಯರ ಸಂಘಟನೆಯ ಸಂಯುಕ್ತ ಆಶಯದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಉಪನ್ಯಾಸಕರ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಉಪನ್ಯಾಸಕರುಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಅದನ್ನು ಮಕ್ಕಳಿಗೆ ತಿಳಿಸಿದಾಗ ಮಕ್ಕಳು ಆ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ,
ಉಪನ್ಯಾಸಕರು ಸಮಯ ಪಾಲನೆ ಶಿಸ್ತು, ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸಿದಾಗ, ವಿದ್ಯಾರ್ಥಿಗಳು ಆ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದರು,
ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ವಿಷಯವಾರು ಉಪನ್ಯಾಸಕರುಗಳಿಗೆ ಹಾಗೂ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿಷಯಗಳ ಉಪನ್ಯಾಸಕರುಗಳಿಗೆ ಅಭಿನಂದಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಅಮೃತ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ನಜ್ಹತ್ ಉಲ್ಲಾ ವಹಿಸಿದ್ದರು.
ಕಾರ್ಯಕ್ರದಲ್ಲಿ ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಸಂಘದ ಅಧ್ಯಕ್ಷ ಪಂಡರಿ ನಾಥ್, ಜಿಲ್ಲಾ ಉಪನ್ಯಾಸಕರ ಸಂಘ ದ ಅಧ್ಯಕ್ಷ ಎಸ್. ಯೋಗೀಶ್, ಜಿಲ್ಲೆಯ ಹಾಗೂ ತಾಲ್ಲೂಕಿನ ನಿಂದ ಆಗಮಿಸಿದ ಪ್ರಾಚಾರ್ಯ ಗಳಾದ ವಾಸುದೇವ್, ಶ್ರೀನಿವಾಸ್ ನಾಯ್ಕ, ಕುಟ್ರಿ, ಕೃಷ್ಣ ಮೂರ್ತಿ, ಸಿಸ್ಟೆರ್ ಐರಿನ್, ಗೀತಾ ಬಾಲಚಂದ್ರ, ಜಿಲ್ಲಾ ಉಪನ್ಯಾಸಕರ ಸಂಘದ ಘನಶಾಮ್, ಮಲ್ಲಿಕಾರ್ಜುನ, ದಿನಕರ್, ದಾಮೋದರ್ ಶೈಣ್ಯ, ಹೊಸನಗರ ತಾಲೂಕ್ ಉಪನ್ಯಾಸಕರ ಸಂಘದ ಅಧ್ಯಕ್ಷ ರಾದ ಹಾಲಪ್ಪ ಸಂಕೂರ್ ಇನ್ನಿತರರಿದ್ದರು.
ಉಪನ್ಯಾಸಕರಾದ ಸುಜಯ್ ನಾಡಿಗ್ ಪ್ರಾಥಿಸಿದರು, ಫ್ರಾನ್ಸಿಸ್ ಬೆಂಜಾಮಿನ್, ರಾಜೇಶ್ ಬೋಳಾರ್ ನಿರೂಪಿಸಿದರು.