ಕೆಂಚನಾಲ, ಬಾಳೂರು ಹಾಗೂ ಚಂದಳ್ಳಿಯಲ್ಲಿ ಭಾರಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ , ಆರ್ಥಿಕ ನೆರವು
ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಕುರಿಯ ಕೊಟ್ಟಿಗೆ ಭಾರಿ ಗಾಳಿ ಮಳೆಗೆ ಹಾನಿಯಾಗಿತ್ತು ಮತ್ತು ಚಂದಳ್ಳಿ ,ಬಾಳೂರು ಗ್ರಾಮದಲ್ಲಿ ಮನೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಪ್ರಸ್ತುತ ಬಿಹಾರ ಚುನಾವಣಾ ಪ್ರಚಾರದಲ್ಲಿರುವ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯಂತೆ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದರು.
ಭಾರಿ ಮಳೆಗೆ ಮನೆ ಹಾನಿ :
ಬಾಳೂರು ಗ್ರಾಪಂ ವ್ಯಾಪ್ತಿಯ ಬೆಳಂದೂರು ಸಮೀಪದ ಕಲ್ಮಕ್ಕಿ ಗ್ರಾಮದಲ್ಲಿ ಭಾರಿ ಮಳೆಯಿಂದ ಪುಟ್ಟಪ್ಪ ಗೌಡ ರವರ ಮನೆ ಹಾನಿಯಾಗಿತ್ತು ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಣ್ಣಕ್ಕಿ ಮಂಜು ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯಂತೆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದರು.
ಭಾರಿ ಮಳೆಗೆ ಮನೆ ಹಾನಿ :
ಕೆಂಚನಾಲ ಗ್ರಾಪಂ ವ್ಯಾಪ್ತಿಯ ಚಂದಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಉಷಾ ಮಂಜುನಾಥ್ ರವರ ಮನೆ ಸಂಪೂರ್ಣ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಪರಿಹಾರ ಕೊಡಿಸುವ ಭರವಸೆ ನೀಡಿ , ಆರ್ಥಿಕ ನೆರವು ನೀಡಿದರು.
ಕೆಂಚನಾಲದಲ್ಲಿ ಕುರಿ ಕೊಟ್ಟಿಗೆ ಹಾನಿ :
ಕೆಂಚನಾಲ ಗ್ರಾಮದಲ್ಲಿ ಭಾರಿ ಮಳೆಯಿಂದ ಲತಾ ರವಿ ಎಂಬುವವರ ಕೊಟ್ಟಿಗೆ ಹಾನಿಯಾಗಿತ್ತು ಅದೃಷ್ಟವಶಾತ್ ಕುರಿಗಳು ಪ್ರಾಣಾಪಾಯದಿಂದ ಪಾರಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಶಾಸಕರ ಸೂಚನೆಯ ಮೇರೆಗೆ ಆರ್ಥಿಕ ನೆರವು ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಸದಸ್ಯರಾದ ಕೃಷ್ಣೋಜಿರಾವ್ ,ಬಾಳೂರು ಗ್ರಾಪಂ ಸದಸ್ಯ ದಿವಾಕರ್ , ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷ ಉಮಾಕರ್ ಹಾಗೂ ಇನ್ನಿತರರು ಇದ್ದರು.