Headlines

ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ

ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ

ಶಿವಮೊಗ್ಗ, ಆಗಸ್ಟ್ : ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿ, ಗೊಗ್ಗದ ರಾಜ್ಯ ಅರಣ್ಯದ ಸರ್ವೆ ನಂ.197ರಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ. ಎಂಪಿಎಂ ನಡುತೋಪಿನಲ್ಲಿ ಪತ್ತೆಯಾದ ಈ ಚಿರತೆಯ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಧಿಕಾರಿಗಳ ಪ್ರಕಾರ, ಸುಮಾರು ಮೂರು ವರ್ಷದ ಗಂಡು ಚಿರತೆಯ ಮೃತದೇಹ ಇದಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬರುವವರೆಗೆ ಸಾವಿನ ಕಾರಣ ಸ್ಪಷ್ಟವಾಗುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಥಳೀಯರಿಂದ ಬಂದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರ್ ನಡೆಸಿದ್ದಾರೆ. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಸ್.ರವೀಂದ್ರ ನಾಯ್ಕ, ತಹಶೀಲ್ದಾರ್ ಮಂಜುಳಾ ಶಂಕರ ಭಜಂತ್ರಿ, ನಿಸರ್ಗ ಕನ್ಸರ್ವೇಶನ್ ಟ್ರಸ್ಟ್‌ನ ಜಿ.ಎನ್.ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರುಸಿದ್ದಪ್ಪ, ಹುಲಿ ಸಿಂಹಧಾಮದ ವೈದ್ಯಾಧಿಕಾರಿ ಮುರಳಿ ಮನೋಹರ್, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ರವಿ ಮತ್ತು ಡಾ.ಸುನೀಲ್ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲಿದ್ದರು.