ವೈದ್ಯಕೀಯ ಕ್ಷೇತ್ರದ ಹಿರಿಯ ತಜ್ಞ ಡಾ. ಕೆ.ಬಿ. ನಟರಾಜ್ ನಿಧನ
ರಿಪ್ಪನ್ ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆ ನಿವಾಸಿ ಹಾಗೂ ಖ್ಯಾತ ಚರ್ಮರೋಗ ತಜ್ಞ ಡಾ. ಕೆ.ಬಿ. ನಟರಾಜ ಅವರು ಶನಿವಾರ ರಾತ್ರಿ ಶಿವಮೊಗ್ಗದ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರು ಒರ್ವ ಪುತ್ರನನ್ನು ಒಳಗೊಂಡಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿಯ ನಂತರ ದುರ್ಗಿಗುಡಿಯಲ್ಲಿ ಖಾಸಗಿ ಸಲಹಾ ವೈದ್ಯರಾಗಿ ತಮ್ಮ ಸೇವೆ ಮುಂದುವರಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಶಿವಮೊಗ್ಗದ ಹರಕೆರೆಯ ರುಧ್ರಭೂಮಿಯಲ್ಲಿ ನೆರವೇರಿತು.
ಸಂತಾಪ:
ಡಾ. ನಟರಾಜರ ನಿಧನಕ್ಕೆ ಆನಂದಪುರಂ ಡಾ. ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು, ವೀರಶೈವ ಸಮಾಜ ರಿಪ್ಪನ್ ಪೇಟೆ ಅಧ್ಯಕ್ಷ ಡಾ. ಕೆ.ಬಿ. ಕಮಲಾಕ್ಷರಪ್ಪ, ನಿವೃತ್ತ ಶಿಕ್ಷಕ ಶೇಖರಪ್ಪ ಎಲ್.ವೈ ದಾನೇಶಪ್ಪ, ಜಿ.ಎಂದುಂಡ ರಾಜಪ್ಪ, ಎಂ.ಆರ್. ಶಾಂತವೀರಪ್ಪಗೌಡ, ಡಿ.ಎಸ್. ರಾಜಾಶಂಕರ, ಎಂ.ಎಸ್. ಉಮೇಶ್, ನೆಮಟೂರು ಈಶ್ವರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
 
                         
                         
                         
                         
                         
                         
                         
                         
                         
                        