ಮಧ್ಯರಾತ್ರಿ ಲೇಔಟ್ ಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಡಿದ ದುಷ್ಕರ್ಮಿಗಳು – ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ಅವರು ಜೀನ್ಸ್ ಪ್ಯಾಂಟ್ ಮತ್ತು ಬನಿಯನ್ ಧರಿಸಿದ್ದಾಗಿದ್ದು, ಮುಖ ಮುಚ್ಚಿಕೊಳ್ಳಲು ಬಟ್ಟೆಗಳನ್ನು ಉಪಯೋಗಿಸಿದ್ದರು. ಸೊಂಟದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದ ಅವರು ಕೈಯಲ್ಲಿ ಟಾರ್ಚ್ ಹಿಡಿದಿದ್ದರು. ಒಬ್ಬನು ಕೈಗೆ ಗ್ಲೌಸ್ ಧರಿಸಿದ್ದಾಗ, ಮತ್ತೊಬ್ಬನು ಬ್ಯಾಗ್ ಹಾಕಿಕೊಂಡಿದ್ದಾನೆ.
ಶಿವಮೊಗ್ಗ, ಜುಲೈ 20 – ನಗರದ ಒಡ್ಡಿನಕೊಪ್ಪದ ಸಮೀಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ ಶನಿವಾರ ರಾತ್ರಿ ಶಸ್ತ್ರಾಸ್ತ್ರಗಳನ್ನು ಹಿಡಿದು ಆರು ದುಷ್ಕರ್ಮಿಗಳು ಓಡಾಡಿದ ಘಟನೆ ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿಸಿದೆ.
ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಆರು ಮಂದಿ ದುಷ್ಕರ್ಮಿಗಳು ಬಡಾವಣೆಯ ವಿವಿಧ ರಸ್ತೆಗಳಲ್ಲಿ ಸಂಚರಿಸಿದ್ದು, ಅವರ ಚಟುವಟಿಕೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ದೃಶ್ಯಗಳು ಈಗ ಬಹಿರಂಗವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಅವರು ಜೀನ್ಸ್ ಪ್ಯಾಂಟ್ ಮತ್ತು ಬನಿಯನ್ ಧರಿಸಿದ್ದಾಗಿದ್ದು, ಮುಖ ಮುಚ್ಚಿಕೊಳ್ಳಲು ಬಟ್ಟೆಗಳನ್ನು ಉಪಯೋಗಿಸಿದ್ದರು. ಸೊಂಟದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದ ಅವರು ಕೈಯಲ್ಲಿ ಟಾರ್ಚ್ ಹಿಡಿದಿದ್ದರು. ಒಬ್ಬನು ಕೈಗೆ ಗ್ಲೌಸ್ ಧರಿಸಿದ್ದಾಗ, ಮತ್ತೊಬ್ಬನು ಬ್ಯಾಗ್ ಹಾಕಿಕೊಂಡಿದ್ದಾನೆ.
ಈ ದುಷ್ಕರ್ಮಿಗಳು ಸುಮಾರು ಎರಡೂವರೆ ನಿಮಿಷಗಳ ಕಾಲ ಬಡಾವಣೆಯ ರಸ್ತೆಗಳನ್ನೆಲ್ಲಾ ನಡೆದು ಹೋಗಿದ್ದಾರೆ. ಕೆಲವರು ಮನೆಗಳತ್ತ ಹೊಂಚು ಹಾಕುವ ರೀತಿಯಲ್ಲಿ ನಡೆದುಕೊಂಡಿದ್ದು, ಅವರ ಉದ್ದೇಶದ ಬಗ್ಗೆ ಅನುಮಾನ ಮೂಡಿಸಿದೆ.
ಈ ಘಟನೆ ಶಿವಮೊಗ್ಗದ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.