ಧರ್ಮಸ್ಥಳ ಸಂಘದ ಹಣದ ಕಂತಿನ ವಿಚಾರಕ್ಕೆ ಗಲಾಟೆ – ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿದ ಪತಿರಾಯ
ಆಗ ಅಕ್ಕಪಕ್ಕದಲ್ಲಿದ್ದವರೂ ಗಲಾಟೆ ಬಿಡಿಸಿದ್ದಾರೆ. ತುಂಡಾದ ಮೂಗಿನೊಂದಿಗೆ ವಿದ್ಯಾ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮೂಗು ಜೋಡಿಸುವ ಶಸ್ತ್ರಚಿಕಿತ್ಸೆಗಾಗಿ ಸರ್ಜಿ ಆಸ್ಪತ್ರೆಗೆ ವಿದ್ಯಾಳನ್ನು ರವಾನಿಸಲಾಗಿದೆ.
ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಜಗಳವಾಗಿ ಪತಿಯೆ ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿರುವ ಘಟನೆ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.
ಧರ್ಮಸ್ಥಳ ಸಂಘದಲ್ಲಿ ಎರಡು ಲಕ್ಷ ಸಾಲ ಪಡೆದಿದ್ದ ವಿಜಯ್ ಮತ್ತು ವಿದ್ಯಾ ದಂಪತಿ ಇಬ್ಬರು ಸೇರಿ ವಾರ ವಾರ ಹಣ ಕಟ್ಟುತ್ತಿದ್ದರು.ಆದರೆ ಕಳೆದ ಎರಡು ಮೂರು ವಾರ ಹಣವಿಲ್ಲದ್ದರಿಂದ ವಿದ್ಯಾ ಸಾಲದ ಕಂತು ಪಾವತಿಸಿರಲಿಲ್ಲ ಈ ಬಗ್ಗೆ ಧರ್ಮಸ್ಥಳ ಸಂಘದವರು ಪತಿ ವಿಜಯ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇದೇ ವಿಚಾರವಾಗಿ ದಂಪತಿ ಮಧ್ಯೆ ದೊಡ್ಡ ಜಗಳವಾಗಿದೆ, ಜಗಳ ವಿಕೋಪಕ್ಕೆ ತೆರಳಿದ ಸಂದರ್ಭ ಪತ್ನಿ ವಿದ್ಯಾಳ ಮೂಗನ್ನೇ ಪತಿ ವಿಜಯ್ ಕಚ್ಚಿ ತುಂಡರಿಸಿದ್ದಾನೆ.
ಆಗ ಅಕ್ಕಪಕ್ಕದಲ್ಲಿದ್ದವರೂ ಗಲಾಟೆ ಬಿಡಿಸಿದ್ದಾರೆ. ತುಂಡಾದ ಮೂಗಿನೊಂದಿಗೆ ವಿದ್ಯಾ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮೂಗು ಜೋಡಿಸುವ ಶಸ್ತ್ರಚಿಕಿತ್ಸೆಗಾಗಿ ಸರ್ಜಿ ಆಸ್ಪತ್ರೆಗೆ ವಿದ್ಯಾಳನ್ನು ರವಾನಿಸಲಾಗಿದೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.