Headlines

ಸಮರ್ಪಕ ಗೊಬ್ಬರ ಸಿಗದೇ ಬಂಕಾಪುರದ ರೈತರ ಪರದಾಟ

ಸಮರ್ಪಕ ಗೊಬ್ಬರ ಸಿಗದೇ ಬಂಕಾಪುರದ ರೈತರ ಪರದಾಟ –

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ಜೊತೆಗೆ ಮುಂಗಾರು ಮಳೆ ಸಹ ಆರಂಭವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ತಮ್ಮ ಜಮೀನುಗಳನ್ನು ಹದಮಾಡಿಟ್ಟುಕೊಂಡು, ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಖಾಸಗಿ ಅಂಗಡಿಗಳಿಗೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ಮುಗಿಬೀಳುತ್ತಿದ್ದಾರೆ.

ಆದರೆ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಯೂರಿಯಾ ಗೂಬ್ಬರ ರೈತರಿಗೆ ಸಮರ್ಪಕವಾಗಿ ಗೊಬ್ಬರ ದೊರೆಯದೇ ರೈತರಿಗೆ ಸಂಕಷ್ಟ ಉಂಟಾಗಿದೆ.

ಬಂಕಾಪುರದಲ್ಲಿ ರೈತ ಸಂಪರ್ಕ ಸೊಸೈಟಿ ಅವರಿಂದ ರೈತರಿಗೆ ಸಹಾಯವಾಗಲು 15 ಟನ್ ಯೂರಿಯಾ ಗೊಬ್ಬರವನ್ನು  ತರಸಿ ರೈತರ ಮೂಗಿಗೆ ತುಪ್ಪ ವರೆಸಿದಂಯಾಯಿತು. ಸಮರ್ಪಕವಾಗಿ ಸಿಗದ ಗೊಬ್ಬರಕ್ಕೆ ರೈತರೆಲ್ಲರೂ ಗುಂಪು ಸೇರಿಕೊಂಡು ಚಿರಾಡುತ್ತಾ, ಕೇಕೆ ಹೊಡಿಯುತ್ತಾ. ಗದ್ದಲದ ಗೊಂದಲ ಉಂಟಾಯಿತು. ರೈತರು ಬೆಳಗಿನ ಜಾವ 5  ಗಂಟೆಗೆ ರೈತ ಸಂಪರ್ಕ ಸೊಸೈಟಿಗೆ ಬಂದು ಸದರಿಯಲ್ಲಿ ನಿಂತರೂ ಕೂಡ ನಮಗೆ ಗೊಬ್ಬರ ಕೊಡುತ್ತಿಲ್ಲವೆಂದು ರೈತರ ಆಕ್ರೋಶ ವ್ಯಕ್ತಪಡಿಸಿದರು.

ಮುಂಜಾನೆಯಿಂದಲೇ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ನಮ್ಮ ಕೆಲಸ ಬಿಟ್ಟು ಬಿತ್ತನೆ ಬೀಜ ಖರೀದಿ ಮಾಡುವುದೇ ಕೆಲಸವಾಗಿದೆ ಆದರೆ ಕ್ಯೂ ನಲ್ಲಿದ್ದವರನ್ನು ಬಿಟ್ಟು ಅಧಿಕಾರಿಗಳೊಡನೆ  ಮಾತನಾಡಿ ನೇರವಾಗಿ ಯೂರಿಯಾ ಗೊಬ್ಬರ ಚೀಲಗಳನ್ನು ಒಯ್ಯತ್ತಿದ್ದರು. ಸೊಸೈಟಿ ಅವರು ರೈತರಿಗೆ ಪ್ರತಿಯೊಬ್ಬರಿಗೂ ಗೊಬ್ಬರ ಸಿಗಬೇಕೆಂದು ಒಂದು ಹೊಲದ ಖಾತೆಯವರಿಗೆ ಗೊಬ್ಬರದ ಎರಡು ಚೀಲ ವೆಂದು ಹೇಳಿ, ಅಧಿಕಾರಿಗಳು ತಮಗೆ ಬೇಕಾದವರಿಗೆ ಐದರಿಂದ ಹತ್ತು ಚೀಲ ದಂತೆ  ಸಾಗಿಸಿದರು. ಸದರಿಯಲ್ಲಿ ನಿಂತ ರೈತರಿಗೆ ಗೊಬ್ಬರ ಇಲ್ಲದಂತಾಯಿತು. ಯೂರಿಯಾ ಗೊಬ್ಬರ ಪಡೆಯದ ರೈತರು ಅಧಿಕಾರಿಗಳೊಡನೆ ಆಕ್ರೋಶ ವ್ಯಕ್ತಪಡಿಸಿದರು.

ವರದಿ  : ನಿಂಗರಾಜ್ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ್