Headlines

ಬಿಎಲ್ ಓ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಲು ಜಿಲ್ಲಾಧಿಕಾರಿಗೆ ಮನವಿ

ಬಿಎಲ್ ಓ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಲು ಜಿಲ್ಲಾಧಿಕಾರಿಗೆ ಮನವಿ

ಶಿವಮೊಗ್ಗ : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರನ್ನು ಚುನಾವಣೆಯ ಕೆಲಸದಿಂದ ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಸಂಘದ ಜಿಲ್ಲಾ ಅಧ್ಯಕ್ಷೆ ಪ್ರೇಮಾ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಬಿಎಲ್‌ಓ ಕೆಲಸವನ್ನು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೂರರಿಂದ ಆರು ವರ್ಷದ ಮಕ್ಕಳು ಈ ಮಕ್ಕಳು ಅಂಗನವಾಡಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದು, ಇವರಿಗೆ ಶಾಲಾ ಪೂರ್ವ ಶಿಕ್ಷಣವನ್ನು ನೀಡಬೇಕಾಗಿದೆ. ಈ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ  ಟಿ ಎಚ್ ಆರ್ ಕೊಟ್ಟು  ಎಫ್ ಅರ್ ಎಸ್ ಮಾಡಬೇಕು. ಮಾತೃವಂದನಾ ಯೋಜನೆಯ ಆನ್ಲೈನ್ ಅರ್ಜಿಗಳನ್ನು ಕಾರ್ಯಕರ್ತರೇ ಹಾಕಬೇಕಿದೆ. ಹೀಗೆ ಇಲಾಖೆಯ ಅನೇಕ ಕೆಲಸ ಕಾರ್ಯ ಮತ್ತು ಸರ್ವೇಗಳನ್ನು ಮಾಡಬೇಕಾಗಿರುವುದರಿಂದ ತಮ್ಮನ್ನು ಕೈಬಿಡಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಿ ದರ್ಜೆ ನೌಕರರು ಈ ಕೆಲಸ ಮಾಡಬೇಕು ಎಂದಿದೆ. ಆದರೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಸಿ ದರ್ಜೆ ನೌಕರರು ಅಲ್ಲ. ಆದ್ದರಿಂದ ಇವರನ್ನು ಕೈ ಬಿಟ್ಟು ಬಿಎಲ್‌ಓ ಕೆಲಸಕ್ಕೆ ಬೇರೆಯವರನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಯಶೋದಾ, ತ್ರಿವೇಣಿ ಮೊದಲಾದವರಿದ್ದರು.