w
Headlines
Home » ಕೆರೆಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ಕೆರೆಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಣ

GridArt 20250515 214732417.jpg

ಕೆರೆಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ;-ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಳಗಿನ ಒಕ್ಕಲಿಗರ ಕೆರೆಹಳ್ಳಿ ಸಂಪರ್ಕ ರಸ್ತೆ ಕಾಮಗಾರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ಡಾಂಬರೀಕರಣ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ಬಗ್ಗೆ ಸ್ಥಳೀಯ ನಾಗರೀಕರು ಸಾಕಷ್ಟು ಭಾರಿ ಮನವಿ ಮಾಡಿಕೊಳ್ಳುವ ಮೂಲಕ ಬೇಡಿಕೆ ಸಲ್ಲಿಸುತ್ತಿದ್ದರು.ಬಹುದಿನಗಳ ಬೇಡಿಕಯಂತೆ ಸರ್ಕಾರದ ಶಾಸಕರ ವಿಶೇಷ ಅನುದಾನದಡಿಯಲ್ಲಿ ಈ ರಸ್ತೆಯ ಅಭಿವೃದ್ದಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪ್ರಗತಿಯಲ್ಲಿದ್ದು ಆದರ ವೀಕ್ಷಣೆ ನಡೆಸಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.

ನಂತರ ಕೆಳಗಿನ ಒಕ್ಕಲಿಗರ ಕೆರೆಹಳ್ಳಿ ನಿವಾಸಿಗಳು ಶಾಸಕ ಗೋಪಾಲಕೃಷ್ಣ ಬೇಳೂರು ಇವರನ್ನು  ಮೈಸೂರು ಪೇಟಾ ಶಾಲು ಹಾಕಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಆಧ್ಯಕ್ಷ ಚಿದಂಬರ್, ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಬಿ.ಜೆ.ಚಂದ್ರುಮೌಳಿಗೌಡರು, ಎಪಿಎಂಸಿ ಮಾಜಿ ಆಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಕೆರೆಹಳ್ಳಿ ರವೀಂದ್ರ, ಕೆ.ದೇವರಾಜ್‌ಕೆರೆಹಳ್ಳಿ , ಮುರಳಿಧರ, ಮಂಜುನಾಥ,ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷಿö್ಮ.ಸದಸ್ಯರಾದ ಡಿ.ಈ.ಮಧುಸೂದನ್, ಆಶೀಫ್‌ಭಾಷಾ ,ನಿರೂಫ್‌ಕುಮಾರ್,ಸಾರಾಭಿ. ಪ್ರಕಾಶಪಾಲೇಕರ್, ಮಹಾಲಕ್ಷಿö್ಮ, ಅರಸಾಳು ಗ್ರಾಮ ಪಂಚಾಯಿತ್ ಸದಸ್ಯ, ಉಮಾಕರ್, ಹರ್ಷಕುಮಾರ್,ಖಲೀಲ್ ಷರೀಫ್,ವಕೀಲರಾದ ಬಸವರಾಜ್ , ಶಿವು ವಡಾಹೊಸಳ್ಳಿ, ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.