ದೊಡ್ಡಿನಕೊಪ್ಪ ಎಸ್.ಸಿ.ಕಾಲೋನಿ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ
ರಿಪ್ಪನ್‌ಪೇಟೆ;-ಇಲ್ಲಿನ ಬರುವೆ ಗ್ರಾಮದ ದೊಡ್ಡಿನಕೊಪ್ಪ ಪರಿಶಿಷ್ಟ ಜಾತಿ ಪಂಗಡದ ಕಾಲೋನಿ ಸಂಪರ್ಕ ರಸ್ತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
ಸರ್ಕಾರದ ಎಸ್.ಸಿ ಜನಾಂಗದ ವಿಶೇಷ ಅನುದಾನದಲ್ಲಿ ಸುಮಾರು 20 ಲಕ್ಷ ರೂ ವೆಚ್ಚದ ಕಾಂಕ್ರೇಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಈ ಕಾಮಗಾರಿಯು ನಿರ್ಮಿತಿ ಕೇಂದ್ರದವರು ನಿರ್ವಹಿಸುತ್ತಿದ್ದು ಸಮರ್ಪಕವಾಗಿ ಕಾಮಗಾರಿ ಮಾಡುವಂತೆ ನಿರ್ಮಿತಿ ಕೇಂದ್ರದ ಗುತ್ತಿಗೆದಾರನಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷಿö್ಮ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂಧನ್, ಆಶೀಫ್‌ಭಾಷಾ, ಆರ್.ವಿ.ನಿರೂಫ್‌ಕುಮಾರ್, ದಾನಮ್ಮ, ಮಹಾಲಕ್ಷಿö್ಮ, ಪ್ರಕಾಶಪಾಲೇಕರ್,ಸಾರಾಭಿ.ಅನುಪಮರಾಕೇಶ,ಗಣಪತಿ ಗವಟೂರು, ಗ್ಯಾರೆಂಟಿ ಸಮಿತಿಯ ಆಧ್ಯಕ್ಷ ಚಿದಂಬರ್, ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಬಿ.ಜಿ.ಚಂದ್ರಮೌಳಿಗೌಡರು,ಎಪಿಎಂಸಿ.ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಕೆರೆಹಳ್ಳಿ ರವೀಂದ್ರ,ರಾಜುಗೌಡ ಶೆಟ್ಟಿಬೈಲು, ಶಿವ ವಡಾಹೊಸಳ್ಳಿ, ವಕೀಲರಾದ ಬಸವರಾಜ,ಇನ್ನಿತರ ಹಲವರು ಹಾಜರಿದ್ದರು.