ರಿಪ್ಪನ್ ಪೇಟೆ : ಏಕಾಏಕಿ ಬಂದ ಭಾರಿ ಪ್ರಮಾಣದ ಸುಂಟರಗಾಳಿಗೆ ವಿದ್ಯುತ್ ಕಂಬ, ಮರಗಳು ಧರೆಗುರುಳಿದ್ದು ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಗವಟೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ವಿಚಾರ ತಿಳಿಯುತಿದ್ದಂತೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ವೈಯಕ್ತಿಕ ಪರಿಹಾರ ವಿತರಿಸಿದರು.



ಗವಟೂರಿನ ಸರ್ಕಾರಿ ಶಾಲೆಯ ಕಾಂಪೌಂಡ್, ವಿದ್ಯುತ್ ಕಂಬಗಳು ಹಾಗೂ ಮರಗಳು, ತೆಂಗಿನಮರ ಧರಾಶಾಹಿ ಘಟನೆ, ಅನೇಕ ಮನೆಗಳ ಹೆಂಚುಗಳು, ಶೀಟುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿ ಅಪಾರ ನಷ್ಟ ಸಂಭವಿಸಿತ್ತು.ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮರ, ವಿದ್ಯುತ್ ಕಂಬಗಳು ರಸ್ತೆ ಮೇಲೆ ಉರುಳಿ ಬಿದ್ದ ಕೆಲಕಾಲ ಹೊಸನಗರ – ರಿಪ್ಪನ್‌ಪೇಟೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷರು , ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ , ಮುಖಂಡರಾದ ಬಿ ಪಿ ರಾಮಚಂದ್ರ, ಈಶ್ವರಪ್ಪ ಗೌಡ , ಮಧುಸೂಧನ್ , ಆಸಿಫ಼್ ಭಾಷಾ , ರವೀಂದ್ರ ಕೆರೆಹಳ್ಳಿ ,ನಿರೂಪ್ ಕುಮಾರ್ , ಚಂದ್ರೇಶ್ , ಚಿಂತು ,ಗಣಪತಿ ಗವಟೂರು , ಮಲ್ಲಿಕಾರ್ಜುನ್ , ಮಂಜುಳಾ ಕೆ ರಾವ್ ,ಶ್ರೀಧರ್ , ರಾಜು ಗೌಡ , ವಿಶ್ವಾಸ್ ಹೊಸನಗರ ಹಾಗೂ ಪಿಡಿಓ ನಾಗರಾಜ್ ಇದ್ದರು.