ಸುಂಟರಗಾಳಿ ಆರ್ಭಟಕ್ಕೆ ಮನೆಗಳಿಗೆ ಅಪಾರ ಹಾನಿ – ಐದು ಲಕ್ಷ ಪರಿಹಾರಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಒತ್ತಾಯ
ರಿಪ್ಪನ್ ಪೇಟೆ : ಸುಂಟರಗಾಳಿ ಆರ್ಭಟಕ್ಕೆ ಅಪಾರ ಪ್ರಮಾಣದ ಹಾನಿಯುಂಟಾದ ಪ್ರದೇಶಗಳಿಗೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಏಕಾಏಕಿ ಆರ್ಭಟಿಸಿದ ಸುಂಟರಗಾಳಿಗೆ ವಿದ್ಯುತ್ ಕಂಬ, ಮರಗಳು ಧರೆಗುರುಳಿದ್ದು ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಹರತಾಳು ಹಾಲಪ್ಪ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ವೈಯಕ್ತಿಕ ಪರಿಹಾರ ಧನ ವಿತರಿಸಿದರು.


ಈ ಸಂಧರ್ಭದಲ್ಲಿ ಮಾತನಾಡಿದ ಅವರು ಪ್ರಕೃತಿಯಿಂದ ಉಂಟಾಗುವ ಅವಘಡದಿಂದ ಭಾರಿ ನಷ್ಟವುಂಟಾಗುತ್ತದೆ. ಇಂದು ಗವಟೂರಿನಲ್ಲಿ ನಡೆದ ಸುಂಟರಗಾಳಿ ಅವಘಡದ ಬಗ್ಗೆ ಸಾಗರ ಉಪವಿಭಾಗಧಿಕಾರಿಯವರ ಬಳಿಯೂ ಚರ್ಚೆ ನಡೆಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಿಸಲಾಗಿದೆ. ಇನ್ನೂ ಸರ್ಕಾರ ನೊಂದ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ,ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಎನ್ ,ಪ್ರಧಾನ ಕಾರ್ಯದರ್ಶಿ ಸುಂದರೇಶ್ , ಮುಖಂಡರಾದ ಆರ್ ಟಿ ಗೋಪಾಲ್ ,ಆನಂದ್ ಮೆಣಸೆ , ಸುರೇಶ್ ಸಿಂಗ್ ,ನಾಗಾರ್ಜುನ ಸ್ವಾಮಿ , ಮಂಜುಳಾ ಕೆ ರಾವ್ , ಸುಧೀರ್ ಪಿ ಹಾಗೂ ಮಲ್ಲಿಕಾರ್ಜುನ್ ಇದ್ದರು..