January 11, 2026

BANKAPURA | ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

GridArt_20250504_201339291.jpg

BANKAPURA | ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

ಬಂಕಾಪುರ ಪಟ್ಟಣದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಆಭರಣ ಕಳ್ಳತನ ಪ್ರಕರಣದಲ್ಲಿ ಬಂಕಾಪುರ ಪಿಎಸೈ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಪೊಲೀಸರು ಕಲಬುರಗಿ ಮೂಲದ ಇಬ್ಬರನ್ನು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿ, 1.65 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಆರೋಪದಲ್ಲಿ ಬಂಧಿತರನ್ನು ಕಲಬುರಗಿ ಜಿಲ್ಲೆಯ ರಾಮತೀರ್ಥ ಗ್ರಾಮದ ನಿವಾಸಿಗಳಾದ 42 ವರ್ಷದ ಕಸ್ತೂರಿ, 20 ವರ್ಷದ ವೆನಿಲಾ @ ಚರಣ್ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರು ಬಂಕಾಪುರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು.19-04-2025 ರಂದು  ಬಂಕಾಪುರ ಪಟ್ಟಣದ ಶಹಾಬಾನು ಎಂಬುವವರ ನೆಕ್ಲೇಸ್ ಬಸ್ ನಿಲ್ದಾಣದಲ್ಲಿ ಕಳ್ಳತನವಾಗಿತ್ತು ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎಸ್ ಪಿ ಅಂಶುಕುಮಾರ್ , ಹೆಚ್ಚುವರಿ ಎಸ್ ಪಿ ಎಲ್ ವೈ ಶಿರಕೊಳ , ಡಿ ಎಸ್ ಪಿ ಗುರುಶಾಂತಪ್ಪ ಸಿಪಿಐ ಅನಿಲ್ ರಾಠೊಡ ಮಾರ್ಗದರ್ಶನದಲ್ಲಿ ಬಂಕಾಪುರ ಪಿಎಸೈ ನಿಂಗರಾಜ್ ಕೆ ವೈ ಹಾಗೂ ಪಿಎಸೈ-2 ಎಸ್ ಎಮ್‌ ವನಹಳ್ಳಿ ನೇತ್ರತ್ವದಲ್ಲಿ  ತನಿಖಾ ತಂಡವನ್ನು ರಚಿಸಿದ್ದರು.

ಪೊಲೀಸರ ತನಿಖಾ ತಂಡ ಅಂತರ ಜಿಲ್ಲಾ ಇಬ್ಬರು ಕಳ್ಳರನ್ನು ಬಂಧಿಸಿ, 1.65 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಐ ಕೆ ರಜನಿ , ಎಂ ಕೆ ನದಾಪ್ ,ವೆಂಕಟೇಶ್ ಲಮಾಣಿ ,ಬೀರಪ್ಪ ಕಳ್ಳಮನಿ , ನಿಂಗಪಪ್ ಪೂಜಾರ ,ಕಮಲಾಕ್ಷಿ ಅಲಗೋಡ ,ಶಿಲ್ಪಾ ಕ್ಯಾಶನಕೇರಿ ,ನೇತ್ರಾ ಚವಡಿ ಹಾಗೂ ಮಾರುತಿ ಇದ್ದರು.

About The Author

Leave a Reply

Your email address will not be published. Required fields are marked *