w
Headlines
Home » ಬಿ ಆರ್ ಪಿ ಗೆ ಡ್ಯಾಂ ಗೆ ವಿಹಾರಕ್ಕೆ ಹೋಗಿದ್ದ ತಂದೆ- ಮಗ ನೀರಲ್ಲಿ ಮುಳುಗಿ ಸಾವು | ಶವ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ –

ಬಿ ಆರ್ ಪಿ ಗೆ ಡ್ಯಾಂ ಗೆ ವಿಹಾರಕ್ಕೆ ಹೋಗಿದ್ದ ತಂದೆ- ಮಗ ನೀರಲ್ಲಿ ಮುಳುಗಿ ಸಾವು | ಶವ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ –

Screenshot 20250421 205153 Chrome.jpg

ಬಿ ಆರ್ ಪಿ ಗೆ ಡ್ಯಾಂ ಗೆ ವಿಹಾರಕ್ಕೆ ಹೋಗಿದ್ದ ತಂದೆ- ಮಗ ನೀರಲ್ಲಿ ಮುಳುಗಿ ಸಾವು | ಶವ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ –

ಶಿವಮೊಗ್ಗ: ಭದ್ರಾ ನದಿಗೆ ಇಳಿದಿದ್ದ ಮಗನನ್ನು ರಕ್ಷಿಸಲು ಹೋದ ತಂದೆಯು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭದ್ರಾವತಿ ಬಳಿಯ ಬಿ ಆರ್ ಪಿ ಡ್ಯಾಂ ಬಳಿ ನಡೆದಿದೆ.

ಭದ್ರಾವತಿಯ ಭೂತನಗುಡಿಯ ನಿವಾಸಿ ಹಫೀಜ್ ಜಾಬರ್ ಮತ್ತು ಅವರ ಪುತ್ರ ಜಾವೇದ್ (14) ಹಾಗೂ ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು ಊಟ ಮುಗಿಸಿ ಪುತ್ರ ಜಾವೇದ್ ಹಿನ್ನೀರಿನಲ್ಲಿ ಇಳಿದಾಗ ಆಳದ  ಅಂದಾಜಿಲ್ಲದ ಕಾರಣ ನೀರು ಪಾಲಾಗಿದ್ದನು.ಇದನ್ನು ನೋಡಿದ ತಂದೆ ಮಗನನ್ನು   ರಕ್ಷಿಸಲು  ನೀರಿಗೆ ಇಳಿದು ಅವರೂ ನೀರುಪಾಲಾಗಿದ್ದರು ,ಸಂಜೆಯ ವೇಳೆ  ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ನೀರಿಗಿಳಿದು ಮುಳುಗಿದ ಮಗನನ್ನು ರಕ್ಷಿಸಲು ಹೋದ ತಂದೆಯೂ ನೀರುಪಾಲಾದ ಘಟನೆಯ ಹಿನ್ನೆಲೆಯಲ್ಲಿ ಮಲ್ಪೆಯ ಈಜು ತಜ್ಞ ಮಲ್ಪೆ ಈಶ್ವರ್ ಅವರನ್ನು ಕರೆಸಿ ಇಬ್ಬರ ಶವವನ್ನು ಹೊರ ತೆಗೆಯಲಾಗಿದೆ. 

ವಿಧಿಯಾಟ ಎಂಬಂತೆ ತಂದೆ ಮಗ ಇಬ್ಬರೂ ನೀರು ಪಾಲಾಗಿದ್ದಾರೆ. ಇಬ್ಬರ ಶವಕ್ಕೆ ಹುಡುಕಾಟ ನಡೆಸಲಾಗಿ ಮಗನ ಶವ ಭಾನುವಾರ ರಾತ್ರಿ ೮ ಗಂಟೆಗೆ ಪತ್ತೆಯಾಗಿದೆ. ಅನುಭವಿ ಈಜುಗಾರರು ಎಷ್ಟು ಹುಡುಕಾಡಿದರೂ ಮತ್ತೊಂದು ಶವ ಸಿಗಲಿಲ್ಲ.

ಈಜು ತಜ್ಞ ಮಲ್ಪೆ ಈಶ್ವರ್ ಅವರನ್ನು ಕರೆಸಿ ರಾತ್ರಿ ೩ ಗಂಟೆಗೆ ನೀರಿನ ನೂರಾರು ಅಡಿ ಆಳದ ಬಂಡೆಯಡಿ ಸಿಲುಕಿಕೊಂಡಿದ್ದ ಶವವನ್ನು ಪತ್ತೆ ಹಚ್ಚಿ ಮೇಲಕ್ಕೆತ್ತಿ ಎಳೆತಂದಿದ್ದಾರೆ.

ಸೋಮವಾರ ಮಧ್ಯಾಹ್ನ ತಂದೆ ಮಗ ಇಬ್ಬರ ಅಂತ್ಯ ಸಂಸ್ಕಾರ ನಡೆದಿದ್ದು ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.