Headlines

RIPPONPETE | ವಿನಾಯಕ ಸರ್ಕಲ್ ನ್ನು ಸ್ಮಾರ್ಟ್ ಅಂಡ್ ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು – ಶಾಸಕ ಬೇಳೂರು ಗೋಪಾಲಕೃಷ್ಣ

RIPPONPETE | ವಿನಾಯಕ ಸರ್ಕಲ್ ನ್ನು ಸ್ಮಾರ್ಟ್ ಅಂಡ್ ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು – ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ

ರಿಪ್ಪನ್‌ಪೇಟೆ;-ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಜೆಟ್‌ನಲ್ಲಿ 4.09 ಲಕ್ಷ ಒಂಬತ್ತು ಸಾವಿರ ಕೋಟಿ ಬಜೆಟ್ ಮಂಡಿಸಿದ್ದು  ಇದರಿಂದ ಆಭಿವೃದ್ದಿಗೆ ಅನುದಾನದ ಹೊಳೆಯೇ ಹರಿದು ಬರಲಿದ್ದು ಶೀಘ್ರದಲ್ಲಿ  ರಿಪ್ಪನ್‌ಪೇಟೆಯ ವಿನಾಯಕ ವೃತ್ತವನ್ನು ಸ್ಮಾರ್ಟ್ ಅಂಡ್ ಹೈಟೆಕ್ ಸರ್ಕಲ್ ಆಗಿ ಪರಿವರ್ತನೆ  ಮಾಡುವುದಾಗಿ ಹೇಳಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ರಿಪ್ಪನ್‌ಪೇಟೆಗೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಮತ್ತು ಸಾಗರ ರಸ್ತೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ತಕ್ಷಣ ಬೋರ್‌ವೆಲ್ ಕೊರಸುವಂತೆ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ಮನವಿ ಮಾಡುತ್ತಿದ್ದಂತೆ ಸ್ಥಳದಲ್ಲಿದ ಪಿಡಿಓ ರಿಗೆ ಎಲ್ಲಲ್ಲಿ ನೀರಿನ ಸಮಸ್ಯೆ ಇದೆ ಎಂಬ ಬಗ್ಗೆ ಮಾಹಿತಿ ನೀಡಿ ತಕ್ಷಣ ಟಾಸ್ಕ್ ಫೋರ್ಸ್ ನಡಿ ರಿಪ್ಪನ್‌ಪೇಟೆಗೆ ಅಗತ್ಯವಿರುವ ಕಡೆಯಲ್ಲಿ ಬೋರ್‌ವೆಲ್ ಕೊರಸುವಂತೆ ಬೋರ್ ಪಾಯಿಂಟ್ ಮಾಡಿಕೊಳ್ಳುವಂತೆ ಶಾಸಕರು ಸೂಚಿಸಿದರು.

ಹೈಟೆಕ್ ವಿನಾಯಕ ಸರ್ಕಲ್ ;

ಅಧಿವೇಶನ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯ್ತಿಯಲ್ಲಿ ಆಧಿಕಾರಿಗಳ ಮತ್ತು ಸಾರ್ವಜನಿಕರ ಸಭೆಯನ್ನು ಕರೆದು ವಿನಾಯಕ ವೃತ್ತವನ್ನು  ಆಗಲಿಕರಣಕ್ಕಾಗಿ 1.20 ಕೋಟಿ ರೂ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ವಿನಾಯಕ ವೃತ್ತ 100 ಮೀಟರ್ ಸುತ್ತಳತೆಯ ರಸ್ತೆ   ಮಧ್ಯದಲ್ಲಿ ಆಶೋಕ ಸ್ತಂಭ ನಿರ್ಮಿಸಿ ಹೈಮಾಸ್ಕ್ ದೀಪಾವನ್ನು ಆಳವಡಿಸುವುದು ಮತ್ತು ನಾಲ್ಕು ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಕರಿಗೆ ತಂಗುದಾಣ (ಶೆಲ್ಟರ್) ನಿರ್ಮಾಣ ಮತ್ತು ಪ್ಯಾಸಂಜರ್ ಆಟೋದವರಿಗೆ ವಾಹನ ನಿಲುಗಡೆಗೆ ಜಾಗ ಮೀಸಲಿಡುವುದು ಮತ್ತು ರಸ್ತೆ ಬದಿಯಲ್ಲಿ ಪಾದಚಾರಿಗಳಿಗೆ ಪುಟ್‌ಪಾತ್‌ಗೆ ಇಂಟರ್ ಲಾಕ್ ಆಳವಡಿಕೆ  ಸೇರಿದಂತೆ ಇನ್ನಿತರ ಅಭಿವೃದ್ದಿ ಕುರಿತು ಚರ್ಚಿಸಿ ನೀಲನಕ್ಷೆ ತಯಾರಿಸಿ ಕಾಮಗಾರಿ ನಡೆಸುವ ಮೂಲಕ ರಿಪ್ಪನ್‌ಪೇಟೆ ವಿನಾಯಕ ವೃತ್ತವನ್ನು ಸ್ಮಾಟ್ ಹೈಟಕ್ (ಮಾದರಿ) ವೃತ್ತವನ್ನಾಗಿ ಪರಿವರ್ತಿಸಲಾಗುವುದೆಂದು ಹೇಳಿದರು.

ಈಗಾಗಲೇ ಪದವಿ ಕಾಲೇಜ್ ಹತ್ತಿರ 20 ಮೀಟರ್ ರಸ್ತೆ ಅಭಿವೃದ್ದಿ ಪಡಿಸಲಾಗುತ್ತಿದ್ದು ಉಳಿದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ರಸ್ತೆ ನಿರ್ಮಾಣ ಕಾಮಗಾರಿ ಅರಂಭಗೊಂಡಿದೆ.ಇನ್ನೂ ವಿನಾಯಕ ವೃತ್ತದಿಂದ ನಾಲ್ಕು ಸಂಪರ್ಕ ರಾಜ್ಯ ಹೆದ್ದಾರಿಯ ಸಾಗರ-ತೀರ್ಥಹಳ್ಳಿ ರಸ್ತೆಯ ತಲಾ ಒಂದೊಂದು ಕಿ.ಮೀ.ರಸ್ತೆ ಆಗಲೀಕರಣ ಕಾಮಗಾರಿಗೆ 4.85 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಭರದಿಂದ ಸಾಗಿದೆ. ಅತಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.ಇನ್ನೂ ಆನಂದಪುರದಿಂದ ರಿಪ್ಪನ್‌ಪೇಟೆಯ ಆರ್.ಎಂ.ಸಿ.ಯಾರ್ಡ್ ಬಳಿಯ 9 ಕಿ.ಮೀ. ರಸ್ತೆ ಆಗಲಿಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ 20 ಕೋಟಿ ರೂ ಆನುದಾನ ಬಿಡುಗಡೆಯಾಗಿ ಟೆಂಡರ್ ಮುಗಿದು ಕಾಮಗಾರಿ  ಭರದಿಂದ ಸಾಗಿದ್ದು ಏಪ್ರಿಲ್  ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವುದೆಂದು ವಿವರಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷಿ, ಸದಸ್ಯರಾದ ಡಿ.ಈ.ಮಧುಸೂದನ್, ಗಣಪತಿ ಗವಟೂರು, ಆಶೀಫ್‌ ಭಾಷಾ, ಪ್ರಕಾಶ್ ಪಾಲೇಕರ್,ಮುಖಂಡರಾದ ರವೀಂದ್ರಕೆರೆಹಳ್ಳಿ, ರಮೇಶ, ಮೋಹಿದ್ದೀನ್, ಖಲೀಲ್‌ಷರೀಪ್, ಕೆ.ದೇವರಾಜ್, ಲೇಖನ ಚಂದ್ರಶೇಖರ್, ಸೀತಾರಾಜಪ್ಪ, ಕೆ.ಸುಶೀಲ ಮೂಡಾಗ್ರೆ, ಗಣೇಶರಾವ್, ನರಸಿಂಹ,ಪಿಡಿಓ ನಾಗರಾಜ್, ಸಿಬ್ಬಂದಿ ನಾಗೇಶ್ ಮೋರೆ ಇನ್ನಿತರ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *