ಕಾರು ಮತ್ತು ಬೈಕ್ ನಡುವೆ ಅಪಘಾತ – ಯುವಕ ಸಾವು
ಕಾರು ಮತ್ತು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು ಕಂಡಿದ್ದಾನೆ.
ಸೀಗೆಹಟ್ಟಿಯ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ನವರ ಪುತ್ರ ಉಲ್ಲಾಸ್ (21) ಸಾವು ಕಂಡ ದುರ್ದೈವಿಯಾಗಿದ್ದಾನೆ.
ಸ್ನೇಹಿತೆಯ ಜೊತೆಯಲ್ಲಿ ಜೈಲ್ ರಸ್ತೆಯ ಕಡೆಯಿಂದ ಶರಾವತಿಯ ನಗರ ಕಡೆ ಹೋಗುವಾಗ ಹೊಸಮನೆ ಏರಿಯಾದ ಚಾನೆಲ್ ಏರಿಯಾದ ನಾಗಪ್ಪ ದೇವಸ್ಥಾನದ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.
ಉಲ್ಲಾಸ್ (20) ಜೆಎನ್ ಎನ್ ಕಾಲೇಜಿನ ಮೂರನೇ ವರ್ಷದ ಡಿಪ್ಲೊಮೋ ಓದುತ್ತಿದ್ದು, ಇವರ ತಂದೆ ಕಾಂತರಾಜ್ ಅಡುಗೆ ಕಂಟ್ರ್ಯಾಕ್ಟರ್ ಆಗಿದ್ದಾರೆ.ಬೈಕ್ ನಲ್ಲಿದ್ದ ಸ್ನೇಹಿತೆಗೂ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪ್ರಕರಣ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ