RIPPONPETE | ಬಾರ್ ಮಾಲೀಕರ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ – ಗ್ರಾಪಂ ಸದಸ್ಯ ಸುಂದರೇಶ್ ಸ್ಪಷ್ಟನೆ
ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಬಾರ್ ಮಾಲೀಕರ ಬಳಿ ಸದಸ್ಯರ ಹೆಸರಿನಲ್ಲಿ ಹಣ ಪಡೆದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಗ್ರಾಪಂ ಸದಸ್ಯ ಸುಂದರೇಶ್ ಸ್ಪಷ್ಟನೆ ನೀಡಿದರು.
ಪಟ್ಟಣದ ರಾಯಲ್ ಕಂಫರ್ಟ್ ಸಭಾಂಗಣದಲ್ಲಿ ನಡೆದ ಪತ್ರೀಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ನನ್ನ ಏಳಿಗೆಯನ್ನು ಸಹಿಸದ ಕೆಲವರು ನಾನು ಜಾಲುಕ್ಯ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಬಳಿ ಹಣ ಪಡೆದಿದ್ದಾನೆ ಎಂದು ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸುಳ್ಳು ಆರೋಪ ಮಾಡುತಿದ್ದು ಈ ಆರೋಪಕ್ಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದರು.
ನಾನು 1994 ರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದು ಅಧಿಕಾರ ಇರಲಿ ಇಲ್ಲದೇ ಇರಲಿ ಜನಸೇವೆ ಮಾಡಿಕೊಂಡು ಜನರ ನಡುವೆ ಇದ್ದೇನೆ ನಾನು ಏನು ಎಂಬುವುದು ನನ್ನ ವಾರ್ಡ್ ನ ಜನರಿಗೆ ಗೊತ್ತು ಇನ್ನೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನನು ಹಣಿಯಲು ಪ್ರಯತ್ನಿಸುತಿದ್ದಾರೆ ಇದಕ್ಕೆಲ್ಲಾ ನಾನು ಬಗ್ಗುವುದಿಲ್ಲ ,ನಾನು ಪುಡಗೋಸಿಗಳಿಗೆಲ್ಲಾ ಬಗ್ಗುವ ಜಾಯಮಾನದವಲ್ಲ ,ಇನ್ನೂ ಈ ವಿಚಾರದ ಬಗ್ಗೆ ಆಣೆ ಪ್ರಮಾಣಕ್ಕೆ ನಾನು ಸಿದ್ದನಾಗಿದ್ದು ಮೊದಲು ಆರೋಪವನ್ನು ಸಾಬೀತುಪಡಿಸಲಿ ಎಂದು ಹೇಳಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದರು.
ಪತ್ರೀಕಾಗೋಷ್ಟಿಯಲ್ಲಿದ್ದ ಚಾಣಕ್ಯ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರಾದ ಅಶ್ವತ್ ಗೌಡ ಮಾತನಾಡಿ ನಾವು ಗ್ರಾಪಂ ಸದಸ್ಯ ಸುಂದರೇಶ್ ರವರಿಗೆ ಹಣ ನೀಡಿದ್ದೇವೆ ಎನ್ನುವ ಆರೋಪ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.ಸುಂದರೇಶ್ ಹಾಗೂ ನಮ್ಮ ನಡುವೆ ಉತ್ತಮ ಸ್ನೇಹವಿದೆಯೇ ಹೊರತು ಯಾವುದೇ ವ್ಯವಹಾರಗಳಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಕೆಲ ವರ್ಷಗಳ ಹಿಂದೆ ನಾವು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತಿದ್ದ ಗವಿಸಿದ್ದೇಶ್ವರ ಬಾರ್ ಅನ್ನು ಕ್ರಯಕ್ಕೆ ಪಡೆದಾಗ ಸ್ವಲ್ಪ ಕಾನೂನು ತೊಡಕುಗಳುಂಟಾಗಿತ್ತು ಆ ಸಂಧರ್ಭದಲ್ಲಿ ಸ್ನೇಹಿತರಾದ ಸುಂದರೇಶ್ ನಮಗೆ ಸಹಾಯ ಮಾಡಿದ್ದಾರೆ , ಅವರ ರಾಜಕೀಯ ವಿರೋಧಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಮ್ಮ ಸುಮ್ಮನೇ ಆರೋಪ ಮಾಡುವುದು ತಪ್ಪು ಎಂದು ಹೇಳಿದರು.
ಮುಖಂಡರಾದ ರಾಮಚಂದ್ರ ಮಾತನಾಡಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯಲ್ಲಿ ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್ ನವರು ನಡೆದುವ ಎಲ್ಲಾ ಭ್ರಷ್ಟಾಚಾರಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುವ ಸುಂದರೇಶ್ ರವರನ್ನು ಸುಳ್ಳು ಆರೋಪದ ಮೂಲಕ ಹಣಿಯಲು ಯತ್ನಿಸಿದ್ದಾರೆ ಆದರೆ ಅದಕ್ಕೆಲ್ಲಾ ಸುಂದರೇಶ್ ಬಗ್ಗುವುದಿಲ್ಲ ಎಂದರು.
ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ , ಮುಖಂಡರಾದ ತುಳೋಜಿರಾವ್ , ದೇವರಾಜ್ ಕೆರೆಹಳ್ಳಿ ಹಾಗೂ ಇನ್ನಿತರರಿದ್ದರು.