RIPPONPETE | ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಶಮನಗೊಳಿಸುವಂತೆ ರಾಷ್ಟ್ರಾಧ್ಯಕ್ಷರಿಗೆ ಪತ್ರ
ರಿಪ್ಪನ್‌ಪೇಟೆ : ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಭಿನ್ನಮತವನ್ನು ಆದಷ್ ಶಮನಗೊಳಿಸಲು ಪಕ್ಷದ ವರಿಷ್ಠರು ಮುಂದಾಗಬೇಕು’ ಎಂದು ಆಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಜೆಪಿ ಪಕ್ಷದ ಜಿಲ್ಲಾ ಹಾಗೂ ತಾಲೂಕ್ ಮಟ್ಟದ ಮುಖಂಡರು ಪತ್ರ ಬರೆಯಲು ಮುಂದಾಗಿದ್ದೇವೆ ಎಂದು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಎಂ ಬಿ ಮಂಜುನಾಥ್ ಹಾಗೂ ಜಿಲ್ಲಾ ಮುಖಂಡ ನಾಗೇಂದ್ರ ಕಲ್ಲೂರು ಜಂಟಿ ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಭಾನುವಾರ ನಡೆದ ರಿಪ್ಪನ್‌ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಂತರಿಕ ಭಿನ್ನಮತ ಎಂಬುದು ಸೆರಗಿನಲ್ಲಿ ಬೆಂಕಿಯನ್ನು ಕಟ್ಟಿಕೊಂಡಂತೆ. ಇದು ಉಲ್ಬಣಗೊಂಡರೆ ಪಕ್ಷವು ದುರ್ಬಲಗೊಳ್ಳುತ್ತದೆ . ಇದರಿಂದ ಜನಹಿತ ಕಾರ್ಯಗಳಿಗೆ ಅಡಚಣೆ ಎದುರಾಗುತ್ತದೆ. ಭಿನ್ನಮತ ಎಂಬುದು ಒಟ್ಟು ಜನಮಾನಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದ್ದರಿಂದ ಭಿನ್ನಮತ ಮತ್ತೆ ಪುನರಾವರ್ತನೆ ಆಗದ ಹಾಗೆ ವರಿಷ್ಠರು ಕೂಡಲೇ ಶಮನ ಗೊಳಿಸುವುದಕ್ಕೆ ಕಾಳಜಿ ವಹಿಸಬೇಕಾಗಿದೆ’ ಎಂದರು.
ರಾಷ್ಟ್ರದಲ್ಲಿಯೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಉತ್ತಮ ಸಂಘಟನೆ ಇರುವಂತಹ ರಾಜ್ಯವಾಗಿದ್ದು ಆದರೆ ಇತ್ತೀಚಿನ ಕೆಲವು ತಿಂಗಳುಗಳಿಂದ ರಾಜ್ಯ ಮುಖಂಡರು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾಜಿ ಸಚಿವರು ವೈಯಕ್ತಿಕ ಟೀಕೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿರುವುದು ಮಾದ್ಯಮಗಳಲ್ಲಿ ಒರತಿದಿನ ಬಿತ್ತರವಾಗುತಿದ್ದು ಇದು ಕಾರ್ಯಕರ್ತರಿಗೆ ಇರಿಸುಮುರಿಸು ತರುವಂತಾಗಿದೆ.ಇನ್ನೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮುಂದುವರೆಸಿರುವುದು ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಮುಖಂಡರು ಹಾಗೂ ಕಾರ್ಯಕರ್ತರಲ್ಲಿಮುಜುಗರ ಉಂಟುಮಾಡುತಿದ್ದು ಪಕ್ಷ ಸಂಘಟನೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಆದ್ದರಿಂದ ಮಾದ್ಯಮಗಳ ಮೂಲಕ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿರುವ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್ ,ರಮೇಶ್ ಜಾರಕಿಹೊಳಿ ಹಾಗೂ ರಾಜ್ಯಾಧ್ಯಕ್ಷರ ನಡುವೆ ಉಂಟಾಗಿರುವ ಬಿರುಕನ್ನು ಹೈಕಮಾಂಡ್ ಸಮಕ್ಷಮದಲ್ಲಿ ಶಮನಗೊಳಿಸಬೇಕಾಗಿದೆ ಇಲ್ಲವಾದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಗಳ ಚುನಾವಣೆ ಹಾಗೂ ಪಕ್ಷದ ಸಾಂಸ್ಥಿಕ ಚುನಾವಣೆಗಳ ದುಷ್ಪರಿಣಾಮ ಬೀರಲಿದೆ ಎಂದರು.
ಈ ಸಂಧರ್ಭದಲ್ಲಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಂದರೇಶ್ , ಮುಖಂಡರಾದ ಸುರೇಶ್ ಸಿಂಗ್ , ನಾಗರತ್ನ ದೇವರಾಜ್ ,ಗಿರೀಶ್ ಜಂಬಳ್ಳಿ , ರಾಮಚಂದ್ರ ಬಳೆಗಾರ್ , ರೇಖಾ ರವಿ ,ಮುರುಳಿ ಕೆರೆಹಳ್ಳಿ ಇದ್ದರು.